Publish Date: Thu, 14 Nov 2019 (09:57 IST)
Updated Date: Thu, 14 Nov 2019 (09:59 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ನವಂಬರ್ 24ಕ್ಕೆ ಒಂದು ವರ್ಷವಾಗುತ್ತಿದೆ. ಇಂದು ಅಭಿಮಾನಿಗಳ ಪ್ರೀತಿಯ ಅಂಬಿಯ ಮೊದಲ ವರ್ಷದ ಪುಣ್ಯ ತಿಥಿ ಇಂದು ನಡೆಯಲಿದೆ.
ಇದಕ್ಕಾಗಿ ಕುಟುಂಬ ವರ್ಗ ಇಂದು ಅರಮನೆ ಮೈದಾನದಲ್ಲಿ ಕುಟುಂಬ ವರ್ಗ ಪುಣ್ಯ ತಿಥಿಯ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ. ಈ ಸಂದರ್ಭದಲ್ಲಿ ಕುಟುಂಬ ವರ್ಗದವರ ಜತೆ ಅಭಿಮಾನಿಗಳೂ ಸೇರಿಕೊಳ್ಳಲಿದ್ದಾರೆ.
ಖಡಕ್ ಮಾತಿನ ಮಲ್ಲನಾದರೂ, ಅಭಿಮಾನಿಗಳನ್ನು ಸ್ನೇಹದಿಂದಲೇ ಕಾಣುವ ವ್ಯಕ್ತಿಯಾಗಿದ್ದವರು ಅಂಬರೀಶ್. ಇಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಪುಣ್ಯತಿಥಿ ಕಾರ್ಯಕ್ರಮಗಳು ನಡೆಯಲಿವೆ.