Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ನಿರ್ಮಾಣದ ಮಾಯಾಬಜಾರ್ ಸಿನಿಮಾ ಟೀಸರ್ ಕತಾರ್ ನಲ್ಲಿ ಬಿಡುಗಡೆ

ಪುನೀತ್ ರಾಜ್ ಕುಮಾರ್ ನಿರ್ಮಾಣದ ಮಾಯಾಬಜಾರ್ ಸಿನಿಮಾ ಟೀಸರ್ ಕತಾರ್ ನಲ್ಲಿ ಬಿಡುಗಡೆ
ಬೆಂಗಳೂರು , ಗುರುವಾರ, 14 ನವೆಂಬರ್ 2019 (09:34 IST)
ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾಗಳು ಹೊಸ ಹೊಸ ಪ್ರಯೋಗಕ್ಕೆ ಮುಂದಾಗುತ್ತಿವೆ. ಇದೀಗ ಪುನೀತ್ ರಾಜ್ ಕುಮಾರ್ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸಿರುವ ಮಾಯಾಬಜಾರ್ 2016 ಎಂಬ ಸಿನಿಮಾದ ಟೀಸರ್ ಕತಾರ್ ನಲ್ಲಿ ಬಿಡುಗಡೆಯಾಗುತ್ತಿದೆ.


ವಸಿಷ್ಠ ಸಿಂಹ, ರಾಜ್ ಬಿ ಶೆಟ್ಟಿ, ಸುಧಾರಾಣಿ, ಚೈತ್ರಾ ರಾವ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಮಾಯಾಬಜಾರ್ 2016. ಸ್ವತಃ ಪುನೀತ್ ಈ ಸಿನಿಮಾದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾ ಶುರುವಾಗಿ ಆಗಲೇ ಎರಡು ವರ್ಷವಾಗಿದೆ. ರಾಧಾಕೃಷ್ಣ ರೆಡ್ಡಿಯವರ ಚೊಚ್ಚಲ ನಿರ್ದೇಶನದ ಸಿನಿಮಾವಿದು.

ಈ ಸಿನಿಮಾದ ಟೀಸರ್ ನವಂಬರ್ 15 ರಂದು ಕತಾರ್ ನ ಕನ್ನಡ ಸಂಘದಲ್ಲಿ ಸ್ವತಃ ಪುನೀತ್ ರಾಜ್ ಕುಮಾರ್ ಅವರಿಂದಲೇ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಈ ಮೊದಲೇ ಪುನೀತ್ ಹೇಳಿಕೊಂಡಿದ್ದರು. ಕವಲು ದಾರಿ ಬಳಿಕ ಇದು ಪುನೀತ್ ನಿರ್ಮಾಣ ಸಂಸ್ಥೆಯ ಎರಡನೇ ಸಿನಿಮಾವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಶ್ಯಾನೆ ಲವ್ ಆಗಿದೆಯಂತೆ!