Select Your Language

Notifications

webdunia
webdunia
webdunia
webdunia

ರಿಯಲ್ ಸ್ಟಾರ್ ಉಪೇಂದ್ರರ ಪ್ರಜಾಕೀಯಗೆ ಜನಸೇವೆ ಮಾಡಲು ದೇಣಿಗೆ ನೀಡುತ್ತಿರುವ ನಟ-ನಟಿಯರು

webdunia
ಬೆಂಗಳೂರು , ಬುಧವಾರ, 12 ಮೇ 2021 (09:40 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಕೊರೋನಾದ ಸಂಕಷ್ಟ ಸಮಯದಲ್ಲಿ ತಮ್ಮ ಪ್ರಜಾಕೀಯದ ಮೂಲಕ ಜನರಿಗೆ ನೆರವಾಗುತ್ತಿದ್ದಾರೆ. ಅವರ ನೆರವಿಗೆ ಸ್ಯಾಂಡಲ್ ವುಡ್ ಸ್ನೇಹಿತರು ಕೈ ಜೋಡಿಸಿದ್ದಾರೆ.


ಉಪೇಂದ್ರ ನೇತೃತ್ವದಲ್ಲಿ ಸಿನಿ, ಕಿರುತೆರೆ ಕಲಾವಿದರು, ಕಾರ್ಮಿಕರಿಗೆ ದಿನಸಿ ಕಿಟ್, ಧನ ಸಹಾಯ ಒದಗಿಸಲಾಗುತ್ತಿದೆ. ಇದಕ್ಕೆ ಅವರಿಗೆ ಚಿತ್ರರಂಗದ ಸ್ನೇಹಿತರು ಸಾಥ‍್ ಕೊಟ್ಟಿದ್ದಾರೆ. ಕಲಾವಿದರು ತಮಗೆ ನೀಡಿದ ಹಣದ ಮೊತ್ತವನ್ನು ಉಪೇಂದ್ರ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಹಿರಿಯ ಕಲಾವಿದೆ ಸರೋಜಾದೇವಿ ನಾಲ್ಕು ಲಕ್ಷ ರೂ. ನೀಡಿದ್ದು ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ತಲುಪಿಸಲಿದ್ದಾರೆ. ಸಾಧು ಕೋಕಿಲ ಎರಡೂವರೆ ಲಕ್ಷ ರೂ. ನೀಡಿದ್ದು, ಇದನ್ನು ಆರ್ಕೆಸ್ಟ್ರಾ ಕಲಾವಿದರ ದಿನಸಿ ಕಿಟ್ ಗೆ ಬಳಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂ.ಗಳ ದೇಣಿಗೆ ನೀಡಿದ್ದು ಇದನ್ನು ಚಲನಚಿತ್ರ ಸಂಗೀತ ಕಲಾವಿದರಿಗೆ ಒದಗಿಸಲಿದ್ದಾರೆ. ಇದೇ ರೀತಿ ನಟ ಶೋಭಾ ರಾಜ್ 10 ಸಾವಿರ ರೂ. ನೀಡಿದ್ದಾರೆ. ಅದಲ್ಲದೆ, ಬೇರೆ ಬೇರೆ ಕ್ಷೇತ್ರದ ಸ್ನೇಹಿತರಿಂದಲೂ ಉಪೇಂದ್ರರಿಗೆ ದೇಣಿಗೆ ಹರಿದುಬಂದಿದೆ. ಇದನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವೆಲ್ಲಾ ಅಸಹಾಯಕರಾಗಿದ್ದೇವೆ: ನಾಗತಿಹಳ್ಳಿ ಚಂದ್ರಶೇಖರ್