Publish Date: Sun, 26 Feb 2017 (11:20 IST)
Updated Date: Sun, 26 Feb 2017 (11:24 IST)
ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ನಿರ್ದೇಶನಕಕ್ಕೆ ವಾಪಸ್ ಆಗಿದ್ದಾರೆ. ಅಪೂರ್ವ ಚಿತ್ರದ ಬಳಿಕ ಅವರು ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ರವಿಮಾಮ ನಿರ್ದೇಶಿಸಲಿರುವ ಚಿತ್ರಕ್ಕೆ ರಾಜೇಂದ್ರ ಪೊನ್ನಪ್ಪ ಎಂದು ಹೆಸರಿಡಲಾಗಿದೆ. ದೃಶ್ಯ ಚಿತ್ರದಲ್ಲಿ ರವಿಚಂದ್ರನ್‍ಗಿದ್ದ ಹೆಸರನ್ನು ಇಲ್ಲಿ ಬಳಸಿಕೊಂಡಿರುವುದು ವಿಶೇಷ.
ಚಿತ್ರದಲ್ಲಿ ರವಿಚಂದ್ರನ್ ಕ್ರಿಮಿನಲ್ ಲಾಯರ್ ಆಗಿ ಕಾಣಿಸಲಿದ್ದಾರೆ. ಇದರ ಜತೆಗೆ ಎಂಎಸ್ ರಮೇಶ್ ಚಿತ್ರದಲ್ಲಿ ಬಣ್ಣಹಚ್ಚುತಿದ್ದಾರೆ. ಆ ಚಿತ್ರಕ್ಕೆ ದಶರಥ ಎಂದು ಹೆಸರಿಡಲಾಗಿದೆ. ಕರ್ವ ಚಿತ್ರದ ಖ್ಯಾತಿಯ ನವನೀತ್ ನಿರ್ದೇಶನದ ಬಕಾಸುರ ಚಿತ್ರದಲ್ಲೂ ರವಿಚಂದ್ರನ್ ಬಿಜಿಯಾಗಿದ್ದಾರೆ.
ಈ ಮೂರು ಚಿತ್ರಗಳು ಒಂದೇ ದಿನ ಸೆಟ್ಟೇರಿರುವುದು ವಿಶೇಷ. ಇದೇ ಮೊದಲ ಬಾರಿಗೆ ರವಿಚಂದ್ರನ್ ಒಟ್ಟಿಗೆ ಮೂರು ಚಿತ್ರಗಳಲ್ಲಿ ಅಭಿನಯಿಸಲು ಮುಂದಾಗಿರುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.