ದುನಿಯಾ ವಿಜಯ್ ಅಭಿನಯದ ’ಮಾಸ್ತಿಗುಡಿ’ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ. ಸಾಧುಕೋಕಿಲ ಸಂಗೀತ ಸಂಯೋಜನೆಯ ಈ ಹಾಡುಗಳನ್ನು ರೆಬೆಲ್ ಸ್ಟಾರ್ ಅಂಬರೀಶ್ ಬಿಡುಗಡೆ ಮಾಡಿದರು.
ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ಚಿತ್ರದ ಇಬ್ಬರು ಖಳನಟರು ದುರಂತ ಸಾವಪ್ಪಿದ್ದರು. ಅದಾದ ಬಳಿಕ ಚಿತ್ರ ಮುಂದುವರೆಯುತ್ತದೋ ಇಲ್ಲವೋ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ಸಾಹಸ ನಿರ್ದೇಶಕರನ್ನು ಪೊಲೀಸರು ಬಂಧನಕ್ಕೆ ಒಳಗಾಗಿದ್ದು ಮತ್ತೆ ಬಿಡುಗಡೆಯಾಗಿದ್ದೂ ಆಯಿತು.
ಇದೀಗ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರ ಆದಷ್ಟು ಬೇಗ ತೆರೆಕಾಣುವ ಸೂಚನೆ ನೀಡಿದೆ. ದುನಿಯಾ ವಿಜಯ್, ಅಮೂಲ್ಯಾ, ಕೃತಿ ಕರಬಂಧ, ರಂಗಾಯಣ ರಘು, ದೇವರಾಜ್, ಸುಹಾಸಿನಿ, ಬಿ ಜಯಶ್ರೀ ಚಿತ್ರದ ತಾರಾಗಣದಲ್ಲಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣವಿರುವ ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.