ಹೈದರಾಬಾದ್ : ಮಾಸ್ಟರ್ ಮತ್ತು ಉಪ್ಪೇನಾ ಚಿತ್ರದ ಮೂಲಕ ನಟ ವಿಜಯ್ ಸೇತುಪತಿ ಅವರು ಚಿತ್ರ ಪ್ರಿಯರ ಮನಗೆದ್ದಿದ್ದಾರೆ. ಹಾಗಾಗಿ ಇದೀಗ ನಟ ರವಿತೇಜ ಹಾಗೂ ವಿಜಯ್ ಸೇತುಪತಿ ಜೊತೆಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ನಟ ರವಿತೇಜ ಹಾಗೂ ವಿಜಯ್ ಸೇತುಪತಿ ಅವರು ಜೊತೆಯಾಗಿ ನಟಿಸುತ್ತಿರುವ ಚಿತ್ರ ಮಲಯಾಳಂ ಸೂಪರ್ ಹಿಟ್ ಚಿತ್ರ ಡ್ರೈವಿಂಗ್ ಲೈಸೆನ್ಸ್ ನ ರಿಮೇಕ್ ಎನ್ನಲಾಗಿದೆ. 2019ರಲ್ಲಿ ಬಿಡುಗಡೆಯದ ಮಲಯಾಳಂ ಚಿತ್ರ ಡ್ರೈವಿಂಗ್ ಲೈಸೆನ್ಸ್ ಸೂಪರ್ ಹಿಟ್ ಆಗಿತ್ತು.
ಇದೀಗ ಇದರ ರಿಮೇಕ್ ನಲ್ಲಿ ಸ್ಟಾರ್ ನಟರು ನಟಿಸುತ್ತಿದ್ದು, ರವಿತೇಜ ಪೃಥ್ವಿರಾಜ್ ಪಾತ್ರದಲ್ಲಿ ಹಾಗೂ ಸೂರಜ್ ವೆಂಜರಮೂಡು ಪಾತ್ರದಲ್ಕಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.