ರತ್ನಮಂಜರಿ: ಟೆಂಟ್ ಸಿನಿಮಾದಿಂದ ಬಂದ ನಾಯಕ ನಾಯಕಿ!

Webdunia
ಶನಿವಾರ, 11 ಮೇ 2019 (17:48 IST)
ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಹಾಡು, ಟೈಲರ್ ಗಳ ಮೂಲಕ ಭರ್ಜರಿಯಾಗಿಯೇ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ಇದೇ ಹದಿನೇಳನೇ ತಾರೀಕಿನಂದು ತೆರೆ ಕಾಣುತ್ತಿದೆ.

ಈ ಚಿತ್ರದ ಹಿಂದೆ ಪ್ರತಿಭಾವಂತ ಯುವಕರದ್ದೊಂದು ತಂಡವೇ ಇದೆ. ಇವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತರಬೇತಿ ಪಡೆದುಕೊಂಡು, ಸಿನಿಮಾ ಕನಸಿನ ಹಾದಿಯಲ್ಲಿ ಸಾಗಿ ಬಂದವರೇ.
ವಿಶೇಷವೆಂದರೆ, ಈ ಚಿತ್ರದ ನಾಯಕ ರಾಜ್ ಚರಣ್ ಮತ್ತು ನಾಯಕಿಯರಲ್ಲೊಬ್ಬರಾಗಿರೋ ಅಖಿಲಾ ಪ್ರಕಾಶ್ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ ಪಳಗಿಕೊಂಡವರು. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸಂಸ್ಥೆಯಿಂದ ಈ ವರೆಗೂ ಚಿತ್ರರಂಗಕ್ಕೆ ಹಲವಾರು ಪ್ರತಿಭಾನ್ವಿತರು ಆಗಮಿಸಿದ್ದಾರೆ. ನಾನಾ ವಿಭಾಗಗಳಲ್ಲಿ ನೆಲೆಯನ್ನೂ ಕಂಡುಕೊಂಡಿದ್ದಾರೆ. ಈ ಸಾಲಿನಲ್ಲಿ ರಾಜ್ ಚರಣ್ ಮತ್ತು ಅಖಿಲಾ ಕೂಡಾ ಸೇರಿಕೊಳ್ಳೋದು ಗ್ಯಾರೆಂಟಿ.
ಯಾಕೆಂದರೆ ರತ್ನಮಂಜರಿಯಲ್ಲಿ ಪ್ರತೀ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವಂಥಾ ಪಾತ್ರವೇ ರಾಜ್ ಚರಣ್ ಮತ್ತು ಅಖಿಲಾ ಅವರುಗಳಿಗೆ ಸಿಕ್ಕಿದೆ. ರಾಜ್ ಚರಣ್ ಅವರಿಗಂತೂ ಮೊದಲ ಚಿತ್ರದಲ್ಲಿಯೇ ಸವಾಲಿನ ಪಾತ್ರವೇ ಸಿಕ್ಕಂತಾಗಿದೆ. ಅವರ ಪಾತ್ರಕ್ಕೆ ಬೇರೆ ಬೇರೆ ರೀತಿಯ ಶೇಡುಗಳಿವೆಯಂತೆ.


ಪಳಗಿದ ನಟರು ಮಾತ್ರವೇ ನಿಭಾಯಿಸುವಂಥಾ ಪಾತ್ರಕ್ಕೆ ಅವರು ಜೀವ ತುಂಬಿದ್ದಾರಂತೆ. ಅಂತೂ ರಾಜ್ ಚರಣ್ ಮತ್ತು ಅಖಿಲಾ ಪ್ರಕಾಶ್ ಮೂಲಕ ಮತ್ತಿಬ್ಬರು ನಾಗತಿಹಳ್ಳಿ ಗರಡಿಯ ಪ್ರತಿಭೆಗಳ ಆಗಮನವಾದಂತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗರ್ಭಾವಸ್ಥೆಯ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಎಲ್ಲರ ಮುಂದೆಯೇ ಕಾಲೆಳೆದ ಪತಿ ಜಹೀರ್ ಇಕ್ಬಾಲ್‌

ಚಾಮುಂಡಿ ತಾಯಿ ದರ್ಶನ ಪಡೆದು ಫ್ಯಾನ್ಸ್ ವಾರ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ಮಾತು ನೋಡಿದ್ರೆ ಹೆಮ್ಮೆ ಅನಿಸಬಹುದು

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಜಿಯೋ ಹಾಟ್‌ಸ್ಟಾರ್ ಸರ್ವರ್‌ ದಿಢೀರ್‌ ಡೌನ್‌: ಸರ್ಚ್‌ ಬಟನ್‌ ನಾಪತ್ತೆ, ಚಂದಾದಾರರ ಪರದಾಟ

ಮುಂದಿನ ಸುದ್ದಿ
Show comments