Webdunia - Bharat's app for daily news and videos

Install App

ಅಜ್ಜಿಯ ಸೀರೆಯ ಕತೆ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

Webdunia
ಮಂಗಳವಾರ, 6 ಮಾರ್ಚ್ 2018 (09:05 IST)
ಬೆಂಗಳೂರು: ಹೆಣ್ಣುಮಕ್ಕಳಿಗೆ ಸೀರೆ ಎಂದರೆ ತುಂಬಾ ಪ್ರೀತಿ. ಅದರಲ್ಲೂ ತಲೆಮಾರುಗಳಿಂದ ಬಂದ ಸೀರೆ ಎಂದರೆ ವಿಶೇಷವಾದ ಕಾಳಜಿ ಇರುತ್ತದೆ. ನಟಿ ರಶ್ಮಿಕಾ ಕೂಡ ಇದರಿಂದ ಹೊರತಾಗಿಲ್ಲ. ಇತ್ತೀಚೆಗೆ 'ಹೆಮ್ಮೆಯ ಕನ್ನಡಿಗ' ಪ್ರಶಸ್ತಿ ಸ್ವೀಕರಿಸಲು ಬಂದಿದ್ದಾಗ ನಟಿ ರಶ್ಮಿಕಾ ಮಂದಣ್ಣ ಕೂರ್ಗಿ ಸ್ಟೈಲ್‌ನಲ್ಲಿ ಧರಿಸಿದ್ದ ಸೀರೆಯ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಮೆರೂನ್‌ ಬಣ್ಣದ ಸೀರೆಯಲ್ಲಿ ರಶ್ಮಿಕಾ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದರು. ಈ ಸೀರೆಯ ಹಿಂದಿರುವ ಒಂದು ಸೆಂಟಿಮೆಂಟಲ್ ಕತೆಯನ್ನು ರಶ್ಮಿಕಾ ಮಂದಣ್ಣ ಬಿಚ್ಚಿಟ್ಟಿದ್ದಾರೆ.

 
ಈ ಸೀರೆ 61 ವರ್ಷದಷ್ಟು ಹಳೆಯ ಸೀರೆಯಂತೆ. ಇದನ್ನು ರಶ್ಮಿಕಾ ಅಜ್ಜಿ ಅವರ ಮದುವೆಯಲ್ಲಿ ಧರಿಸಿದ್ದರಂತೆ. ನಂತರ ಅವರು ಅದನ್ನು ರಶ್ಮಿಕಾ ತಾಯಿಗೆ ನೀಡಿದ್ದರಂತೆ. ಈಗ ರಶ್ಮಿಕಾ ತಾಯಿ ಅದನ್ನು ತಮ್ಮ ಮಗಳಿಗೆ ನೀಡಿದ್ದಾರೆ. ಒಟ್ಟಾರೆಯಾಗಿ  ಈ ಸೀರೆ ಮೂರು ತಲೆಮಾರಿಗೆ ತಲುಪಿದಂತಾಗಿದೆ.


'ನಾನು ಬೆಳೆದಿದ್ದೆಲ್ಲಾ ಅಜ್ಜಿ ಹತ್ತಿರ. ಜೀವನದಲ್ಲಿ 'ಏನೋ ಒಂದು ಆಗುವೆ' ಎಂದು ಅಜ್ಜಿ ಯಾವಾಗಲೂ ನನಗೆ ಹೇಳುತ್ತಿದ್ದರು. ಅವರು ನಮ್ಮನ್ನು ಬಿಟ್ಟು ಹೋದಾಗ ನನಗೆ ಕೋಪ ಬಂದಿತ್ತು. ನಾವು ಅವರನ್ನು ತುಂಬಾ ಮಿಸ್‌ ಮಾಡುತ್ತಿರುವೆ. ಈಗ ಅಜ್ಜಿ ನನ್ನ ನೋಡಿ ಹೆಮ್ಮೆ ಪಡುತ್ತಿರಬಹುದು. ಅವರ ಸೀರೆ ಧರಿಸಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯಾಗಿದೆ. ನನಗೆ ಸಿಕ್ಕಿರುವುದು ನನ್ನ ಮುಂದಿನ ಪೀಳಿಗೆಗೂ ಹೋಗಬೇಕಾಗಿದೆ, ಆದ್ದರಿಂದ ಇದರ ಬಗ್ಗೆ ನನಗೆ ತುಂಬಾ ಸೆಂಟಿಮೆಂಟ್' ಎಂದಿದ್ದಾರೆ. ನಟಿ ರಶ್ಮಿಕಾ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಮುಂದಿನ ಸುದ್ದಿ
Show comments