Webdunia - Bharat's app for daily news and videos

Install App

ರಶ್ಮಿಕಾ ಮಂದಣ್ಣ ಮತ್ತೆ ಎಡವಟ್ಟು: ಅಪ್ಪ-ಅಮ್ಮನ ವಾರ್ಷಿಕೋತ್ಸವಕ್ಕೆ ತಡವಾಗಿ ವಿಶ್!‌

Webdunia
ಶುಕ್ರವಾರ, 24 ಜೂನ್ 2022 (17:25 IST)
ಸೆಲೆಬ್ರೆಟಿಗಳು ಒಬ್ಬರು ಮತ್ತೊಬ್ಬರ ಹುಟ್ಟುಹಬ್ಬ, ದಿನಾಚರಣೆಗಳು, ಹಬ್ಬ ಹೀಗೆ ಎಲ್ಲದಕ್ಕೂ ವಿಶ್‌ ಮಾಡುವುದು ವಾಡಿಕೆ. ಅದರಲ್ಲೂ ಅಪ್ಪ-ಅಮ್ಮನನ್ನು ಆಗಾಗ ನೆನಪಿಸಿಕೊಳ್ಳುವುದು, ಅವರಿಗೆ ಶುಭ ಕೋರುವುದು ಸಹಜ. ಆದರೆ ನಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಹೆತ್ತವರ ಮದುವೆ ವಾರ್ಷಿಕೋತ್ಸವ ದಿನಾಂಕವನ್ನೇ ಮರೆತು ಟ್ರೋಲ್‌ ಗೆ ಒಳಗಾಗಿದ್ದಾರೆ.
ಹೌದು, ರಶ್ಮಿಕಾ ಮಂದಣ್ಣ ಈ ಹಿಂದೆ ಹಲವು ನಟರ ಹುಟ್ಟು ಹಬ್ಬವನ್ನು ಮರೆತು ಟ್ರೋಲ್ ಆಗಿದ್ದನ್ನು ನೋಡಿದ್ದೀರಿ. ಅದರಲ್ಲೂ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಟಾಪ್ ನಟರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದೇ ಅಭಿಮಾನಿಗಳಿಂದ ಹಿಡಿ ಶಾಪ ಹಾಕಿಸಿಕೊಂಡಿದ್ದಾರೆ. ಆದರೆ, ಈ ಬಾರಿ ಹೆತ್ತವರ  ಮದುವೆ ದಿನವನ್ನೇ ಮರೆತು, ತಡವಾಗಿ ವಿಶ್ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಇನ್‌ ಸ್ಟಾಗ್ರಾಂನಲ್ಲಿ ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವವನ್ನು ತಡವಾಗಿ ನೆನಪಿಸಿಕೊಂಡು ಭಾವನಾತ್ಮಕವಾಗಿ ಪೋಸ್ಟ್ ಮಾಡಿರುವ ರಶ್ಮಿಕಾ, ಈ ಜಗತ್ತಿಗೆ ನನ್ನನ್ನು ಕೊಡುಗೆಯಾಗಿ ನೀಡಿದ್ದಕ್ಕೆ ಮತ್ತು ಜನ್ಮ ಕೊಟ್ಟಿದ್ದಕ್ಕೆ ಧನ್ಯವಾದಗಳು. ಇವತ್ತು ನಾನು ಈ ಮಟ್ಟದಲ್ಲಿ ಇದ್ದೇನೆ ಅಂದರೆ, ಅದಕ್ಕೆ ನೀವೇ ಕಾರಣ. ಸದಾ ನಾನು ನಿಮಗೆ ಋಣಿಯಾಗಿರುವೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ತಡವಾಗಿ ಶುಭ ಕೋರುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಭಿಮಾನಿಗಳು, ಪುಣ್ಯಕ್ಕೆ ತಡವಾದರೂ ವಿಶ್ ಮಾಡಿದ್ದೀರಲ್ಲ ಗ್ರೇಟ್ ಎಂದು ಹೇಳಿದಾರೆ.
ಇನ್ನೂ ಕೆಲವರು ಮರೆತಿದ್ದರೆ ಇನ್ನೂ ಅನಾಹುತ ಆಗಿರುವುದು ಎಂದು ಎಚ್ಚರಿಸಿದ್ದಾರೆ. ತಂದೆ ತಾಯಿಯನ್ನೇ ಮರೆತಿರುವುದರಿಂದ ಈ ಹಿಂದಿನ ಎಲ್ಲಾ ಆವಾಂತರಗಳನ್ನು ಕ್ಷಮಿಸಲಾಗುವುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮುಂದಿನ ಸುದ್ದಿ
Show comments