Select Your Language

Notifications

webdunia
webdunia
webdunia
webdunia

ವ್ಯಂಗ್ಯ ಮಾಡಿದ ಲತಾ ಮಂಗೇಶ್ಕರ್ ಗೆ ರಾನು ಮೊಂಡಾಲ್ ಹೇಳಿದ್ದೇನು ಗೊತ್ತಾ?

ವ್ಯಂಗ್ಯ ಮಾಡಿದ ಲತಾ ಮಂಗೇಶ್ಕರ್ ಗೆ ರಾನು ಮೊಂಡಾಲ್ ಹೇಳಿದ್ದೇನು ಗೊತ್ತಾ?
ಮುಂಬೈ , ಸೋಮವಾರ, 16 ಸೆಪ್ಟಂಬರ್ 2019 (09:02 IST)
ಮುಂಬೈ: ರೈಲ್ವೇ ನಿಲ್ದಾಣದಲ್ಲಿ ಬಿಕ್ಷೆ ಬೇಡುತ್ತಾ ಜೀವನೋಪಯಾಗಕ್ಕಾಗಿ ಹಾಡುತ್ತಿದ್ದ ರಾನು ಮೊಂಡಾಲ್ ಈಗ ಹಿಮೇಶ್ ರೇಶಿಮಿಯಾ ಸಿನಿಮಾದಲ್ಲಿ ಹಾಡಿ ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾರೆ.


ಈ ಗಾಯಕಿ ಥೇಟ್ ಲತಾ ಮಂಗೇಶ್ಕರ್ ಧ್ವನಿಯನ್ನೇ ಅನುಕರಿಸುತ್ತಿದ್ದಾರೆ. ಹೀಗಾಗಿ ಇತ್ತೀಚೆಗೆ ಪತ್ರಕರ್ತರು ಲತಾ ಮಂಗೇಶ್ಕರ್ ಬಳಿ ರಾನು ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಲತಾ ಅನುಕರಣೆ ಒಳ್ಳೆಯದಲ್ಲ. ಒಂದು ವೇಳೆ ನನ್ನ ಹೆಸರು, ಧ್ವನಿಯಿಂದ ಯಾರಿಗಾದರೂ ಒಳ‍್ಳೆಯದಾಗುತ್ತಿದ್ದರೆ ನನ್ನ  ಅದೃಷ್ಟ ಎಂದುಕೊಳ್ಳುತ್ತೇನೆ ಎಂದಿದ್ದರು.

ಲತಾ ಮಂಗೇಶ್ಕರ್ ಅವರ ಈ ಹೇಳಿಕೆ ನೆಟ್ಟಿಗರಿಗೆ ಇಷ್ಟವಾಗಿರಲಿಲ್ಲ.  ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಾನು ಮಾತ್ರ ವಯಸ್ಸಿನಲ್ಲೂ ಲತಾ ನನಗಿಂತ ದೊಡ್ಡವರು. ನಾನು ಯಾವತ್ತೂ ಅವರ ಜ್ಯೂನಿಯರ್ ಆಗಿರಲು ಇಷ್ಟಪಡುತ್ತೇನೆ. ಅವರು ನನಗೆ ಬಾಲ್ಯದಿಂದಲೂ ಸ್ಪೂರ್ತಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಿದ್ದೆ ಇಲ್ಲಿ ತನಕ ಟೈಟಲ್ ಸಾಂಗ್ ಇಂದು ರಿಲೀಸ್