Webdunia - Bharat's app for daily news and videos

Install App

Kamal Haasan: ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿದ್ದು ಯಾಕೆ: ರಂಜನಿ ರಾಘವನ್ ಸ್ಪಷ್ಟನೆ

Krishnaveni K
ಬುಧವಾರ, 4 ಜೂನ್ 2025 (12:05 IST)
ಬೆಂಗಳೂರು: ಕನ್ನಡದ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಕಮಲ್ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿದ್ದು ಯಾಕೆ ಎಂಬ ಬಗ್ಗೆ ನಟಿ ರಂಜನಿ ರಾಘವನ್ ಸ್ಪಷ್ಟನೆ ನೀಡಿದ್ದಾರೆ.
 

ಕಮಲ್ ಹಾಸನ್ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂಬುದು ವಿವಾದಕ್ಕೆ ಕಾರಣವಾಗಿದೆ. ಇದೀಗ ಕರ್ನಾಟಕದಲ್ಲಿ ಅವರ ಸಿನಿಮಾ ಥಗ್ ಲೈಫ್ ಗೆ ನಿಷೇಧದ ಭೀತಿಯೂ ಇದೆ. ಹೀಗಿರುವಾಗ ಕನ್ನಡಿಗರ ಕ್ಷಮೆಯನ್ನೂ ಕೇಳಲು ಅವರು ಸಿದ್ಧರಿಲ್ಲ.

ಈ ವಿವಾದದ ನಡುವೆಯೇ ರಂಜನಿ ರಾಘವನ್ ತಾವು ಬರೆದ ಕತೆ ಡಬ್ಬಿ ಪುಸ್ತಕದ ಪ್ರತಿಯೊಂದನ್ನು ಕಮಲ್ ಹಾಸನ್ ಗೆ ನೀಡಿರುವ ಫೋಟೋ ಹಾಕಿ ಕಮಲ್ ಸರ್ ಗೆ ಕನ್ನಡ ಪುಸ್ತಕ ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ವಿವಾದದ ನಡುವೆ ನಿಮ್ಮ ಪುಸ್ತಕ ಪ್ರಮೋಷನ್ ಮಾಡುತ್ತಿದ್ದೀರಾ ಎಂದೂ ಕೆಲವರು ತಪ್ಪಾಗಿ ಅರ್ಥೈಸಿ ಟ್ರೋಲ್ ಮಾಡಿದ್ದರು. ಇದೆಲ್ಲದಕ್ಕೂ ರಂಜನಿ ರಾಘವನ್ ಈಗ ಸ್ಪಷ್ಟನೆ ಕೊಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಕಮಲ್ ಸರ್ ನ ಭೇಟಿ ಮಾಡಿ ನನ್ನ ನಿರ್ದೇಶನದ ಢೀ ಢೀ ಸಿನಿಮಾ ಪೋಸ್ಟರ್ ಕೊಟ್ಟು ಅವರ ಕೈಯಿಂದಲೇ ಟೀಸರ್ ಲಾಂಚ್ ಮಾಡಿಸುವ ಪ್ರಯತ್ನ ನಮ್ಮದಾಗಿತ್ತು. ಅದಕ್ಕಾಗಿ ಮೂರು ತಿಂಗಳ ಹಿಂದೆ ಅವರನ್ನು ಭೇಟಿ ಮಾಡಿದ್ದೆ. ಆಗ ಅವರಿಗೆ ನನ್ನ ಪುಸ್ತಕವನ್ನೂ ನೀಡಿದ್ದೆ. ಅದನ್ನೇ ಈ ಸಂದರ್ಭದಲ್ಲಿ ಹಾಕಿ ಕನ್ನಡದ ಬಗ್ಗೆ ಅವರು ಹೇಳಿರುವ ಮಾತು ಒಪ್ಪುವಂತಹದ್ದಲ್ಲ ಎಂದು ಸಂದೇಶ ಸಾರಲು ಈ ಫೋಟೋ ಹಾಕಿದ್ದೆ. ಇದೀಗ ಅವರು ಕನ್ನಡದ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಕಾರಣಕ್ಕೆ ಅವರ ಕೈಯಿಂದ ಪೋಸ್ಟರ್ ರಿಲೀಸ್ ಮಾಡಿರುವ ಫೋಟೋ ಅಥವಾ ಟೀಸರ್ ಲಾಂಚ್ ಮಾಡಿಸುವ ಯೋಜನೆಯನ್ನೂ ಕೈ ಬಿಟ್ಟಿದ್ದೇವೆ ಎಂದಿದ್ದಾರೆ. ಅವರು ಏನು ಹೇಳಿದ್ದಾರೆ ಇಲ್ಲಿದೆ ಪೂರ್ತಿ ವಿಡಿಯೋ.

 
 
 
 
 
 
 
 
 
 
 
 
 
 
 

A post shared by ರಂಜನಿ ರಾಘವನ್ (@ranjani.raghavan)

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಮುಂದಿನ ಸುದ್ದಿ
Show comments