Webdunia - Bharat's app for daily news and videos

Install App

ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಬಗ್ಗೆ ನಟಿ ರಮ್ಯಾ ಬರೆದಿದ್ದು ನೋಡಿದ್ರೆ ನಿಮಗೆ ಅಚ್ಚರಿಯಾಗುತ್ತದೆ

Krishnaveni K
ಶುಕ್ರವಾರ, 28 ಮಾರ್ಚ್ 2025 (09:09 IST)
Photo Credit: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಮ್ಯಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಬಗ್ಗೆ ಬರೆದಿರುವ ಬರಹವೊಂದು ನಿಮಗೆ ಅಚ್ಚರಿಯಾಗಬಹುದು.

ಡಿಕೆ ಶಿವಕುಮಾರ್ ಮೇಲೆ ನಟಿ ರಮ್ಯಾಗೆ ಎಂಥಾ ಗೌರವವಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ರಮ್ಯಾ ರಾಜಕೀಯದಲ್ಲಿ ಸ್ಥಾನ ಮಾನ ಪಡೆಯಲು ಡಿಕೆಶಿ ಕೂಡಾ ಕಾರಣವೇ. ಈಗ ಡಿಕೆಶಿ ಮಗಳು ಐಶ್ವರ್ಯಾ ಕಾಲೇಜಿನ ಕಾರ್ಯಕ್ರಮದಲ್ಲಿ ರಮ್ಯಾ ಪಾಲ್ಗೊಂಡಿದ್ದಾರೆ.

ಈ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡ ರಮ್ಯಾ, ಡಿಕೆಶಿ ಮಗಳ ಜೊತೆ ತಮ್ಮ ಬಾಂಧವ್ಯ ಹೇಗಿತ್ತು ಎನ್ನುವುದನ್ನು ಬರೆದುಕೊಂಡಿದ್ದಾರೆ. ‘ಐಶು, ನಿನ್ನನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಈಗ ನೀನು ಬೆಳೆದು ನಿಂತಿರುವ ರೀತಿ ನನಗೆ ಹೆಮ್ಮೆ ಎನಿಸುತ್ತದೆ. ಚಿಕ್ಕವಳಿದ್ದಾಗ ನಿನಗೆ ಸ್ವಿಮ್ಮಿಂಗ್ ಹೇಳಿಕೊಡುವುದರಿಂದ ಹಿಡಿದು ಒಟ್ಟಿಗೇ ಶಾಪಿಂಗ್ ಮಾಡಿದ್ದು, ನನ್ನ ಸಿನಿಮಾ ಸ್ಕ್ರೀನಿಂಗ್ ವೇಳೆ ಒಟ್ಟಿಗೇ ವಿಶಲ್ ಹೊಡೆಯುವುದರವರೆಗೆ ನಿನ್ನನ್ನು ನೋಡಿದ್ದೇನೆ. ಇಂದು ನೀನು ಬೆಳೆದು ನಿಂತಿರುವುದು ಎಲ್ಲರಿಗೂ ಮಾದರಿ. ಯಾವತ್ತೂ ನಿನ್ನ ಗೆಳತಿಯಾಗಿಯೇ ಇರಲು ಬಯಸುತ್ತೇನೆ’ ಎಂದಿದ್ದಾರೆ. ಇವರ ಈ ಬಾಂಧವ್ಯ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಅಕ್ಕ-ತಂಗಿಯರ ಹಾಗಿದ್ದೀರಿ ಎಂದು ಕಾಮೆಂಟ್ ಮಾಡಿದರೆ ಇಬ್ಬರೂ ಛಲಗಾತಿಯರು ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

ಮುಂದಿನ ಸುದ್ದಿ
Show comments