ಬೆಂಗಳೂರು: ಸಿನಿಮಾಗಳಿಂದ ದೂರವಿದ್ದರೂ ಈಗಲೂ ತಮ್ಮ ಚಾರ್ಮ್ ಉಳಿಸಿಕೊಂಡಿರುವ ನಟಿ ರಮ್ಯಾ ಈಗಲೂ ಮದುವೆಯಾಗದೇ ಉಳಿದಿದ್ದಾರೆ. ಅವರ ಮದುವೆ ಬಗ್ಗೆ ಆಗಾಗ ರೂಮರ್ ಗಳು ಬರುತ್ತಲೇ ಇರುತ್ತವೆ.
ಇದೀಗ ರಮ್ಯಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಯುವಕನೋರ್ವನ ಜೊತೆಗೆ ಕ್ಲೋಸಪ್ ಆಗಿರುವ ಫೋಟೋವೊಂದನ್ನು ಪ್ರಕಟಿಸಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದಾರೆ. ರಮ್ಯಾ ಇಷ್ಟು ಕ್ಲೋಸ್ ಆಗಿ ತೆಗೆಸಿಕೊಂಡಿರುವ ಫೋಟೋದಲ್ಲಿರುವ ಯುವಕ ಯಾರು ಎಂಬ ಪ್ರಶ್ನೆ ಎಲ್ಲರಲ್ಲಿದೆ. ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೇ ರಮ್ಯಾ ಫೋಟೋ ಅಳಿಸಿ ಹಾಕಿದ್ದಾರೆ.