Select Your Language

Notifications

webdunia
webdunia
webdunia
webdunia

ಶಿವಗಾಮಿ ಪಾತ್ರಕ್ಕೆ ರಾಜಮೌಳಿ ಆಯ್ಕೆ ರಮ್ಯಾಕೃಷ್ಣ ಆಗಿರಲಿಲ್ಲ..!

ಶಿವಗಾಮಿ ಪಾತ್ರಕ್ಕೆ ರಾಜಮೌಳಿ ಆಯ್ಕೆ ರಮ್ಯಾಕೃಷ್ಣ ಆಗಿರಲಿಲ್ಲ..!
ಹೈದ್ರಾಬಾದ್ , ಸೋಮವಾರ, 8 ಮೇ 2017 (16:33 IST)
ರಾಜಮೌಳಿ ನಿರ್ದೇಶನದ ಬಾಹುಬಲಿ ಮತ್ತು ಬಾಹುಬಲಿ-2 ಚಿತ್ರದಲ್ಲಿ ಅತ್ಯಂತ ಗಮನ ಸೆಳೆಯುವ ಪಾತ್ರ ರಾಜಮಾತೆ ಶಿವಗಾಮಿ ಗಂಭೀರ ನಡವಳಿಕೆ, ರಾಜವಂಶದ ಗತ್ತುಗಳನ್ನೊಳಗೊಂಡ ಆ ಪಾತ್ರದಲ್ಲಿ ರಮ್ಯಾಕೃಷ್ಣ ಅಬ್ಬರಿಸಿದ್ದಾರೆ. ಅಸಲಿ ವಿಷಯವೆಂದರೆ, ಶಿವಗಾಮಿ ಪಾತ್ರದ ಮೊದಲ ಆಯ್ಕೆ ರಮ್ಯಾಕೃಷ್ಣ ಆಗಿರಲಿಲ್ಲ ಎನ್ನುತ್ತವೆ ವರದಿಗಳು.

ಬಾಲಿವುಡ್`ನ ಖ್ಯಾತ ನಟಿ ಶ್ರೀದೇವಿಗೆ ಈ ಆಫರ್ ಕೊಟ್ಟಿದ್ದರಂತೆ ರಾಜಮೌಳಿ. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಮೂಲಕ ಶ್ರೀದೇವಿಗೆ ಶಿವಗಾಮಿ ಪಾತ್ರ ಮಾಡುವಂತೆ ಕೇಳಿದ್ದರಂತೆ. ಆದರೆ, ಶ್ರೀದೇವಿ 5 ಕೋಟಿ ರೂ. ಸಂಭಾವನೆ ಕೇಳಿದ್ದರಂತೆ. ಹೀಗಾಗಿ, ಶಿವಗಾಮಿ ಪಾತ್ರಕ್ಕೆ 2.5 ಕೋಟಿ ರೂ. ಸಂಭಾವನೆ ಕೊಟ್ಟು ರಮ್ಯಾಕೃಷ್ಣರನ್ನ ಆಯ್ಕೆಮಾಡಿದರಂತೆ.

ಬಾಹುಬಲಿ ಚಿತ್ರ ಶೂಟಿಂಗ್ ಮುಗಿದ ಬಳಿಕ ರಾಜಮೌಳಿಗೆ ರಾಜಮೌಳಿ ಪಾತ್ರಕ್ಕೆ ತಮ್ಮ ಮೊದಲ ಆಯ್ಕೆಗಿಂತ 2ನೇ ಆಯ್ಕೆಯೇ ಉತ್ತಮ . ಶಿವಗಾಮಿ ಪಾತ್ರಕ್ಕೆ ಜೀವ ತುಂಬಿರುವ ರಮ್ಯಾಕೃಷ್ಣ ಮನೋಜ್ಞ ಅಭಿನಯ ನೀಡಿರುವ ರಮ್ಯಾಕೃಷ್ಣ ಜನರ ಮನ ಗೆದ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಿತ್ರ ಬಿಟ್ಟು ತಮಿಳು ಚಿತ್ರದತ್ತ ಸಂಯುಕ್ತಾ ಹೆಗಡೆ..?