Publish Date: Sat, 21 Nov 2020 (10:28 IST)
Updated Date: Sat, 21 Nov 2020 (10:30 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ತಾವು ಕಟ್ಟಿರುವ ಪ್ರಜಾಕೀಯ ಪಕ್ಷದ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಲೇ ಇರುತ್ತಾರೆ. ಇದೀಗ ಅವರ ಪ್ರಜಾಕೀಯ ನಿಲುವುಗಳನ್ನು ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೆಚ್ಚಿ ಮಾತನಾಡಿದ್ದಾರೆ.
ಉಪೇಂದ್ರರ ಪ್ರಜಾಕೀಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೊಗಳಿರುವ ರಾಮ್ ಗೋಪಾಲ್ ವರ್ಮಾ ಇದು ರಾಜಕೀಯ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಹೊಸತನದ ಹೆಜ್ಜೆ. ಉಪೇಂದ್ರರ ಈ ಪ್ರಯತ್ನವನ್ನು ಕೊಂಡಾಡಲೇಬೇಕು ಎಂದು ಪ್ರಜಾಕೀಯ ವೆಬ್ ಸೈಟ್ ಲಿಂಕ್ ಸಮೇತ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.