Webdunia - Bharat's app for daily news and videos

Install App

ತಮನ್ನಾ ಜೊತೆ ಸಲುಗೆ: ಗಂಡನ ಮೇಲೆ ರಂಭಾ ಅಸಮಾಧಾನ!

Krishnaveni K
ಶುಕ್ರವಾರ, 9 ಫೆಬ್ರವರಿ 2024 (12:15 IST)
Photo Courtesy: Twitter
ಚೆನ್ನೈ: ಒಂದು ಕಾಲದಲ್ಲಿ ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದ ನಟಿ ರಂಭಾ ಈಗ ಮದುವೆಯಾಗಿ ಮೂವರು ಮಕ್ಕಳಾದ ಮೇಲೆ ಚಿತ್ರರಂಗದಿಂದ ದೂರವಾಗಿದ್ದಾರೆ. ಆದರೆ ರಂಭಾ ಬಗ್ಗೆ ಈಗ ಗಾಸಿಪ್ ಒಂದು ಕೇಳಿಬಂದಿದೆ.

ರಂಭಾ ತನ್ನ ಪತಿ ಇಂದ್ರಕುಮಾರ್ ಪದ್ಮನಾಥನ್ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿಯಿದೆ. ಇದಕ್ಕೆ ಕಾರಣ ಮಿಲ್ಕಿ ಬ್ಯೂಟಿ ತಮನ್ನಾ. ಅಮೆರಿಕಾದಲ್ಲಿ ಉದ್ಯಮಿಯಾಗಿರುವ ಇಂದ್ರಕುಮಾರ್ ತಮ್ಮ ಮಾಡ್ಯುಲರ್ ಇಂಟೀರಿಯರ್ಸ್ ಬ್ರ್ಯಾಂಡ್ ಮ್ಯಾಜಿಕ್ ಹೋಮ್ ನ ಮೊದಲ ಭಾರತೀಯ ಶಾಖೆಯನ್ನು ಚೆನ್ನೈನಲ್ಲಿ ತೆರೆದಿದ್ದಾರೆ. ಈ ಮಳಿಗೆಯನ್ನು ತಮನ್ನಾ ಉದ್ಘಾಟಿಸಿದ್ದರು. ಅಂದಿನಿಂದ ಇಬ್ಬರ ನಡುವೆ ಸಲುಗೆ ಬೆಳೆದಿದೆ.

ಇತ್ತೀಚೆಗೆ ಮ್ಯಾಜಿಕ್ ಹೋಂ ಸಂಸ್ಥೆಯ ವತಿಯಿಂದ ಶ್ರೀಲಂಕಾದಲ್ಲಿ ಮ್ಯೂಸಿಕಲ್ ಕಾರ್ಯಕ್ರಮವೊಂದು ನಡೆಯಲಿದೆ. ಆ ಕಾರ್ಯಕ್ರಮಕ್ಕೆ ತಮನ್ನಾ ಬರಲಿದ್ದಾರೆ. ಈ ರೀತಿ ತನ್ನ ಗಂಡನ ಜೊತೆ ತಮನ್ನಾ ಸಲುಗೆಯಿಂದಿರುವುದು ರಂಭಾಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ ಎಂಬ ಸುದ್ದಿಯೊಂದು ತಮಿಳು ವಾಹಿನಿಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ರಂಭಾ ಸಂದರ್ಶನವೊಂದರಲ್ಲಿ ಪತಿ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಫಾಲೋ ಮಾಡುತ್ತಿಲ್ಲ. ಆದರೆ ತಮನ್ನಾರನ್ನು ಫಾಲೋ ಮಾಡುತ್ತಿದ್ದಾರೆ ಎಂದು ಹುಸಿ ಮುನಿಸು ತೋರಿಸಿದ್ದಾರೆ. ಹೆಂಡತಿಯಾಗಿ ನನಗೆ ಆದ್ಯತೆ ಕೊಡು ಎಂದು ಹೇಳುತ್ತಿರುತ್ತೇನೆ ಎಂದಿದ್ದರು. ಇದನ್ನಿಟ್ಟುಕೊಂಡು ಈಗ ರಂಭಾ ತನ್ನ ಗಂಡನ ಮೇಲೆ ತಮನ್ನಾ ವಿಚಾರಕ್ಕೆ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments