Select Your Language

Notifications

webdunia
webdunia
webdunia
webdunia

ಬಾಯ್ ಫ್ರೆಂಡ್ ಗಾಗಿ ಲಿಪ್ ಕಿಸ್ ನಿಯಮ ಮುರಿದ ತಮನ್ನಾ

ಬಾಯ್ ಫ್ರೆಂಡ್ ಗಾಗಿ ಲಿಪ್ ಕಿಸ್ ನಿಯಮ ಮುರಿದ ತಮನ್ನಾ
ಚೆನ್ನೈ , ಬುಧವಾರ, 28 ಜೂನ್ 2023 (16:37 IST)
Photo Courtesy: Twitter

ಚೆನ್ನೈ: ನಟಿ ತಮನ್ನಾ ಭಾಟಿಯಾ ತಮ್ಮ ಇಷ್ಟು ವರ್ಷದ ವೃತ್ತಿ ಜೀವನದಲ್ಲಿ ಒಮ್ಮೆಯೂ ಸಹ ನಟನಿಗೆ ಲಿಪ್ ಕಿಸ್ ಮಾಡಿಲ್ಲ. ಆದರೆ ಈಗ ಅವರೇ ಆ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಅದೂ ತಮ್ಮ ಬಾಯ್ ಫ್ರೆಂಡ್ ವಿಜಯ್ ವರ್ಮಗಾಗಿ!

ತಮನ್ನಾ-ವಿಜಯ್ ವರ್ಮ ಜೊತೆಯಾಗಿ ನಟಿಸಿರುವ ‘ಲಸ್ಟ್ ಸ್ಟೋರಿಸ್ 2’ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ. ಲಸ್ಟ್ ಸ್ಟೋರೀಸ್ 2 ನಲ್ಲಿ ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ವಿಜಯ್ ವರ್ಮಗೆ ಲಿಪ್ ಕಿಸ್ ಮಾಡಿದ್ದಾರೆ.

ವಿಜಯ್ ವರ್ಮ ಜೊತೆ ತಮನ್ನಾ ಡೇಟಿಂಗ್ ವಿಚಾರ ಎಲ್ಲರಿಗೂ ಗೊತ್ತಿರುವುದೇ. ಇದೀಗ ತಮ್ಮ ಬಾಯ್ ಫ್ರೆಂಡ್ ಗೆ ಕಿಸ್ ಮಾಡಬೇಕಿರುವುದರಿಂದ 17 ವರ್ಷಗಳ ತಮ್ಮ ಆನ್ ಸ್ಕ್ರೀನ್ ಲಿಪ್ ಕಿಸ್ ರೂಲ್ಸ್ ನ್ನು ತಮನ್ನಾ ಬ್ರೇಕ್ ಮಾಡಿದ್ದಾರಂತೆ. ಇದೇ ಮೊದಲ ಬಾರಿಗೆ ತೆರೆ ಮೇಲೆ ಸಹ ನಟನಿಗೆ ಮುತ್ತುಕೊಡುತ್ತಿರುವುದಾಗಿ ತಮನ್ನಾ ಹೇಳಿದ್ದರಂತೆ. ಇದನ್ನು ಸ್ವತಃ ವಿಜಯ್ ಹೇಳಿದ್ದು, ತನಗಾಗಿ ತಮನ್ನಾ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಛೇದನ ವದಂತಿಗಳ ಬಗ್ಗೆ ಅಧಿಕೃತ ಹೇಳಿಕೆ ನೀಡಿದ ನಟಿ ಆಸಿನ್