BBK12 ರನ್ನರ್ ಅಪ್ ಆದ ಬಳಿಕ ರಕ್ಷಿತಾ ಶೆಟ್ಟಿ ಶಾಕಿಂಗ್ ಹೇಳಿಕೆ

Krishnaveni K
ಸೋಮವಾರ, 19 ಜನವರಿ 2026 (09:38 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಫಿನಾಲೆ ಮುಕ್ತಾಯವಾಗಿದ್ದು ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಕರಾವಳಿ ಹುಡುಗಿ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ. ಮೊದಲ ರನ್ನರ್  ಅಪ್ ಆದ ಬಳಿಕ ರಕ್ಷಿತಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ರಕ್ಷಿತಾ ಶೆಟ್ಟಿ ಫೈನಲ್ ಗೆಲ್ಲದೇ ಇದ್ದರೂ ಸಾಕಷ್ಟು ಜನರ ಪ್ರೀತಿ ಸಂಪಾದಿಸಿದ್ದಾರೆ. ರನ್ನರ್ ಅಪ್ ಆದ ಅವರು ಒಟ್ಟು 25 ಲಕ್ಷ ರೂ. ಬಹುಮಾನ ಮೊತ್ತ ಜೇಬಿಗಿಳಿಸಿಕೊಂಡಿದ್ದಾರೆ. ರನ್ನರ್ ಅಪ್ ಆದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಫೈನಲ್ ಗೆ ಬಂದಿದ್ದು ಖುಷಿಯಾಗಿದೆ. ಯಾವ ಸ್ಥಾನ ಸಿಕ್ಕಿದೆ ಎನ್ನುವುದು ಮ್ಯಾಟರ್ ಆಗಲ್ಲ. ನಾನು ಇಲ್ಲಿಯವರೆಗೆ ಬಂದಿದ್ದೀನಿ. ಸಾಕಷ್ಟು ಜನರ ಪ್ರೀತಿ ಗಳಿಸಿದ್ದೀನಿ. ಟ್ರೋಫಿ ಒಂದು ಗೆದ್ದಿಲ್ಲ ಅಷ್ಟೇ. ಜನರು ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾರೆ. ನಾನೇ ವಿನ್ನರ್ ಅಲ್ವಾ’ ಎಂದು ಸಂತೋಷದಿಂದಲೇ ಹೇಳಿಕೆ ನೀಡಿದ್ದಾರೆ.

ಗಿಲ್ಲಿ ಗೆದ್ದಿದ್ದು ನನಗೆ ಖುಷಿಯಾಗಿದೆ. ನನಗೆ ಮೊದಲೇ ಗೊತ್ತಿತ್ತು. ಒಂದೋ ನಾನು ಇಲ್ಲಾ ಗಿಲ್ಲಿ ಗೆಲ್ತಾರೆ ಅಂತ. ಇನ್ನು ಮುಂದೆಯೂ ವ್ಲಾಗಿಂಗ್ ಮಾಡಿಕೊಂಡು ಇರ್ತೀನಿ. ದೊಡ್ಡ ದೊಡ್ಡ ಮಾತು ಹೇಳಲು ನನಗೆ ಬರಲ್ಲ. ಆದರೆ ಎಲ್ಲರ ಪ್ರೀತಿಗೆ ಥ್ಯಾಂಕ್ಸ್’ ಎಂದು ರಕ್ಷಿತಾ ಹೇಳಿದ್ದಾರೆ. ಸಾಮಾನ್ಯವಾಗಿ ಸೋತಿದ್ದಕ್ಕೆ ಜನ ಬೇಸರಗೊಳ್ಳುತ್ತಾರೆ. ಆದರೆ ರಕ್ಷಿತಾ ಅದನ್ನು ನಗು ನಗುತ್ತಲೇ ಸ್ವೀಕರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್‌ ಟ್ರೋಫಿ ಗೆದ್ದ ಗಿಲ್ಲಿ ನಟನಿಗೆ ಭರ್ಜರಿ ಬಹುಮಾನ: ಅಚ್ಚರಿಯ ಗಿಫ್ಟ್‌ ನೀಡಿದ ಕಿಚ್ಚ ಸುದೀಪ್‌

BigBoss Season 12Finale: 6ನೇ ಸ್ಪರ್ಧಿಯಾಗಿ ದೊಡ್ಮನೆಯಿಂದ ಹೊರಬಂದ ಸ್ಟ್ರಾಂಗ್ ಅಭ್ಯರ್ಥಿ

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ದಾಳಿ, ಸರ್ಕಾರದಲ್ಲಿ ವಿಶೇಷ ಮನವಿಯಿಟ್ಟ ಕನ್ನಡ ನಟ ಅನಿರುದ್ಧ್‌

ಬಿಜೆಪಿ ಸಂಸದನ ಬೀರುಗೆ ಕನ್ನ ಹಾಕಿದ ಖದೀಮರು, ಬರೋಬ್ಬರಿ ₹5.40ಕಳ್ಳತನ

ಕಿಚ್ಚನ ಚಪ್ಪಾಳೆ ವಿಷಯದಲ್ಲಿ ಜೀವನ್ನೇ ಜಾಲಾಡಿಬಿಟ್ರಲ್ಲ, ಸುದೀಪ್‌ ಖಡಕ್‌ ಕೌಂಟರ್‌

ಮುಂದಿನ ಸುದ್ದಿ
Show comments