Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ದರ್ಶನ್-ಪ್ರೇಮ್ ಟಾಕ್ ವಾರ್ ಬಗ್ಗೆ ರಕ್ಷಿತಾ ಪ್ರೇಮ್ ಬೇಸರ

webdunia
ಸೋಮವಾರ, 19 ಜುಲೈ 2021 (09:05 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ ಹೇಳಿಕೆಯಿಂದ ಮನನೊಂದು ನಿರ್ದೇಶಕ ಪ್ರೇಮ್ ಮಾಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಸಾಕಷ್ಟು ಸುದ್ದಿ ಮಾಡಿತ್ತು. ಈ ಬಗ್ಗೆ ಈಗ ಪ್ರೇಮ್ ಪತ್ನಿ, ರಕ್ಷಿತಾ ಪ್ರತಿಕ್ರಿಯೆ ನೀಡಿದ್ದಾರೆ.


ರಕ್ಷಿತಾ ಪ್ರೇಮ್ ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಖೇದ ವ್ಯಕ್ತಪಡಿಸಿದ್ದಾರೆ. ನಮ್ಮ ಇಂಡಸ್ಟ್ರಿ ಎಂದರೆ ನಮ್ಮ ಮನೆ ಇದ್ದಂತೆ. ಇಲ್ಲಿ ಯಾರೂ ದೊಡ್ಡವರಿಲ್ಲ, ಸಣ್ಣವರಲ್ಲ. ನಾವೆಲ್ಲರೂ ಪರಸ್ಪರ ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ.

ಅವರವರ ಕೆಲಸ ಅವರವರನ್ನು ದೊಡ್ಡವರು ಮತ್ತು ಸಣ್ಣವರು ಎಂದು ನಿರ್ಧರಿಸುತ್ತೆ. ಆದರೆ ಪರಿಸ್ಥಿತಿ ಬದಲಾಗಿದ್ದಿದ್ದರೆ ಎಂದು ಮತ್ತು ಇನ್ನೂ ಉತ್ತಮವಾಗಿದ್ದರೆ ಎಂದು ಬಯಸುತ್ತೇನೆ. ನಾನು ಪ್ರೀತಿಸುವ ಮತ್ತು ನಾನು ಕೇರ್ ಮಾಡುವ ಇಬ್ಬರ ನಡುವೆ ಈ ಘಟನೆ ನಡೆಯುತ್ತಿರುವುದು ಖೇದಕರ ‘ ಎಂದಿದ್ದಾರೆ.

ಅಲ್ಲದೆ, ಈ ವಿಚಾರದಲ್ಲಿ ತಾವು ಯಾರನ್ನು ಬೆಂಬಲಿಸುತ್ತೇನೆ, ತಾವು ಪ್ರೇಮ್ ಬೆಂಬಲಿಸಿದರೆ ಅಪರಾಧ ಎನ್ನುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರೇಮ್ ಪತ್ನಿಯಾಗಿ ನಾನು ಅವರ ಜೊತೆಗೇ ಇರುತ್ತೇನೆ. ಆದರೆ ಈ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ನನ್ನನ್ನು ಯಾಕೆ ಈ ವಿವಾದಲ್ಲಿ ಎಳೆಯುತ್ತೀರಿ? ನಮ್ಮಿಬ್ಬರ ವೈವಾಹಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡುತ್ತೀರಿ ಎಂದು ರಕ್ಷಿತಾ ಕಿಡಿ ಕಾರಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಪ್ರಿಯಾಂಕ ತಿಮ್ಮೇಶ್