ಬೆಂಗಳೂರು: ನಿರ್ದೇಶಕ ಪ್ರೇಮ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿದ ಕಿಡಿಗೇಡಿಗಳು ಇಲ್ಲ ಸಲ್ಲದ ಸುದ್ದಿ ಹಬ್ಬಿಸಿದ್ದು, ಇದಕ್ಕೆ ಪ್ರೇಮ್ ಪತ್ನಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪ್ರೇಮ್ ಹೆಸರಿನ ಖಾತೆ ಸೃಷ್ಟಿಸಿದ್ದ ಕಿಡಿಗೇಡಿಗಳು, ನನ್ನ ಮುಂದಿನ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಎಂದು ಸುಳ್ಳು ಸುದ್ದಿ ನೀಡಿದ್ದರು. ಇದನ್ನು ಗಮನಿಸಿದ ಹಲವರು ಪ್ರೇಮ್ ನಿಜವಾಗಿಯೂ ದರ್ಶನ್ ಜೊತೆ ಸಿನಿಮಾ ಮಾಡುತ್ತಾರೆ ಎಂದೇ ನಂಬಿದ್ದರು.
ಆದರೆ ಇದರ ಬಗ್ಗೆ ಸ್ಪಷ್ಟನೆ ಕೊಟ್ಟ ರಕ್ಷಿತಾ ಈ ಖಾತೆ ನಕಲಿ. ಇದರಲ್ಲಿ ಬಂದ ಸುದ್ದಿಯನ್ನು ನಂಬಬೇಡಿ. ಪ್ರೇಮ್ ಡಿ ಬಾಸ್ ಜೊತೆಗೆ ಸಿನಿಮಾ ಅನೌನ್ಸ್ ಮಾಡಿಲ್ಲ ಎಂದಿದ್ದಾರೆ.