ಬೆಂಗಳೂರು: ಚಿತ್ರನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಪುತ್ರ ನಿರ್ದೇಶಕ ಪನ್ನಗಾಭರಣ ಮೇಲೆ ಆರೋಪವೊಂದು ಕೇಳಿಬಂದಿದೆ.
ಕನ್ನಡ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯಲ್ಲಿರುವ ಕಾರಣಕ್ಕೆ ನಾಗಾಭರಣಗೆ ನೀಡಲಾಗಿರುವ ಸರ್ಕಾರಿ ಕಾರನ್ನು ಪನ್ನಗಾಭರಣ ತಮ್ಮ ಸ್ವಂತ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಿನ್ನೆ ಪನ್ನಗಾಭರಣ ಸ್ನೇಹಿತರಾಗಿದ್ದ ಚಿರು ಸರ್ಜಾ ಅಗಲಿ ಒಂದು ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವಿತ್ತು. ಧ್ರುವ ಸರ್ಜಾರ ಫಾರ್ಮ್ ಹೌಸ್ ನಲ್ಲಿರುವ ಚಿರು ಸಮಾಧಿಯಲ್ಲಿ ನಡೆಯುತ್ತಿದ್ದ ಪೂಜೆಗೆ ತೆರಳಲು ಪನ್ನಗಾಭರಣ ತಂದೆಗೆ ನೀಡಲಾಗಿದ್ದ ಸರ್ಕಾರಿ ಕಾರನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವೀಗ ವಿವಾದಕ್ಕೆ ಕಾರಣವಾಗಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!