Daily Horoscope

ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಒಪ್ಪಿಕೊಳ್ಳಲು ಇವರೇ ಕಾರಣ!

Webdunia
ಭಾನುವಾರ, 13 ಆಗಸ್ಟ್ 2023 (09:40 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಸೆಪ್ಟೆಂಬರ್ 1 ರಂದು ರಿಲೀಸ್ ಆಗುತ್ತಿದೆ. ಇದಕ್ಕೆ ಮೊದಲು ರಕ್ಷಿತ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ.

ಈ ವೇಳೆ ರಕ್ಷಿತ್ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಬಗ್ಗೆ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಈ ಸಿನಿಮಾ ನೀವು ಒಪ್ಪಿಕೊಳ್ಳಲು ಕಾರಣವೇನೆಂದು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ರಕ್ಷಿತ್, ನಿರ್ದೇಶಕ ಹೇಮಂತ್ ರಾವ್ ಎಂದಿದ್ದಾರೆ. ಈ ಸಿನಿಮಾ ಹೇಮಂತ್ ರಾವ್ ಕವಿತೆ. ಅವರು ಲವ್ ಸ್ಟೋರಿ ಮಾಡಿರುವ ರೀತಿ ವಿಭಿನ್ನವಾಗಿದೆ. ಮನು ಆಗಿ ಈ ಸಿನಿಮಾದಲ್ಲಿ ನಿಮಗೆ ಇಷ್ಟವಾಗುವುದು ಖಂಡಿತಾ ಎಂದಿದ್ದಾರೆ. ಸಪ್ತಸಾಗರದಾಚೆ ಎಲ್ಲೊ ಎರಡು ಭಾಗಗಳಲ್ಲಿ ತಯಾರಾಗಿದ್ದು ಸೈಡ್ ಎ ಸೆಪ್ಟೆಂಬರ್ 1 ರಂದು ಸೈಡ್ ಬಿ ಅಕ್ಟೋಬರ್ ನಲ್ಲಿ ರಿಲೀಸ್ ಆಗುತ್ತಿದೆ. ಎರಡು ಪಾರ್ಟ್ ಇಷ್ಟು ಬೇಗ ರಿಲೀಸ್ ಆಗುತ್ತಿರುವುದಕ್ಕೆ ಕಾರಣವನ್ನೂ ರಕ್ಷಿತ್ ತಿಳಿಸಿದ್ದಾರೆ. ಎರಡೂ ಭಾಗಗಳನ್ನು ಒಟ್ಟಿಗೇ ನೋಡಿದರೆ ಮಾತ್ರ ಕತೆ ಸಂಪೂರ್ಣ ಎನಿಸುತ್ತದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments