Webdunia - Bharat's app for daily news and videos

Install App

ಸಪ್ತಸಾಗರದಾಚೆ ಎಲ್ಲೊ 2 ನಡುವೆ ಮತ್ತೆರಡು ಸಿನಿಮಾ ಶೂಟಿಂಗ್ ಮುಗಿಸಿದ ರಕ್ಷಿತ್ ಶೆಟ್ಟಿ

Webdunia
ಗುರುವಾರ, 9 ನವೆಂಬರ್ 2023 (12:20 IST)
Photo Courtesy: Twitter
ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ತಮ್ಮ ಹೋಂ ಬ್ಯಾನರ್ ಪರಂವಾ ಸ್ಟುಡಿಯೋ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿರುತ್ತಾರೆ.

ಇದೀಗ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ರಿಲೀಸ್ ಗದ್ದಲದ ನಡುವೆ ರಕ್ಷಿತ್ ತಮ್ಮ ನಿರ್ಮಾಣದ ಮತ್ತೆರಡು ಹೊಸ ಸಿನಿಮಾ ಶೂಟಿಂಗ್ ಮುಗಿಸಿರುವ ಸುದ್ದಿ ಕೊಟ್ಟಿದ್ದಾರೆ.

ಪರಂವಾ ಸಂಸ್ಥೆಯಿಂದ ಇಬ್ಬನಿ ತಬ್ಬಿದ ಮಳೆಯಲಿ ಮತ್ತು ಬ್ಯಾಚುಲರ್ ಪಾರ್ಟಿ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಈ ಎರಡೂ ಸಿನಿಮಾಗಳ ಶೂಟಿಂಗ್ ಮುಕ್ತಾಯವಾಗಿರುವುದಾಗಿ ರಕ್ಷಿತ್ ತಿಳಿಸಿದ್ದಾರೆ. ಇಬ್ಬನಿ ತಬ್ಬಿದ ಮಳೆಯಲಿ ಸಿನಿಮಾದಲ್ಲಿ ಪಂಚತಂತ್ರ ಸಿನಿಮಾ ಖ್ಯಾತಿಯ ಹೀರೋ ವಿಹಾನ್ ಮತ್ತು ಕಿರುತೆರೆಯ ಖ್ಯಾತ ನಟಿ ಅಂಕಿತಾ ಅಮರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ನವಿರಾದ ಪ್ರೇಮಕತೆಯಾಗಿದೆ.

ಇನ್ನು, ಬ್ಯಾಚುಲರ್ ಪಾರ್ಟಿ ಸಿನಿಮಾ ಕಾಮಿಡಿ ಎಂಟರ್ ಟೈನರ್. ಈ ಸಿನಿಮಾದಲ್ಲಿ ಮೊದಲು ರಿಷಬ್ ಶೆಟ್ಟಿ ಕೂಡಾ ಪಾತ್ರ ಮಾಡುದುವುದೆಂದಿತ್ತು. ಆದರೆ ಕಾಂತಾರ ಬಳಿಕ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಾದ ಮೇಲೆ ಚಿತ್ರತಂಡ ಅವರನ್ನು ಕೈ ಬಿಟ್ಟಿತ್ತು. ಈ ಸಿನಿಮಾದಲ್ಲಿ ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಾಲಿವುಡ್ ನಟ ಗುಲ್ಶನ್ ದೇವಯ್ಯ ಫಸ್ಟ್ ಲುಕ್ ಬಿಡುಗಡೆ ಮಾಡಿದ ಕಾಂತಾರ ತಂಡ

ಸಾಹಸಸಿಂಹ ವಿಷ್ಣುವರ್ದನ್ ಸ್ಮಾರಕಕ್ಕಾಗಿ ಕಿಚ್ಚ ಸುದೀಪ್ ಜಾಗ ಖರೀದಿ

ಸಪ್ಪೆ ಮುಖದಲ್ಲಿ ಪತಿ ದರ್ಶನ್ ನೋಡಲು ಬಂದ ವಿಜಯಲಕ್ಷ್ಮಿ

ಬಳ್ಳಾರಿನಾ, ಪರಪ್ಪನಾ ಅಗ್ರಹಾರನಾ: ದರ್ಶನ್‌ಗೆ ಮುಗಿಯದ ಸಂಕಷ್ಟ

₹100ಕೋಟಿ ಕ್ಲಬ್ ಸೇರುತ್ತಾ, ಮತ್ತೊಂದು ಹೊಸ ದಾಖಲೆ ಮಾಡಿದ ಸು ಫ್ರಮ್ ಸೋ

ಮುಂದಿನ ಸುದ್ದಿ
Show comments