Select Your Language

Notifications

webdunia
webdunia
webdunia
Wednesday, 9 April 2025
webdunia

ರಶ್ಮಿಕಾ ಮಂದಣ್ಣ ಟ್ವಿಟರ್ ನಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ!

ರಶ್ಮಿಕಾ ಮಂದಣ್ಣ
ಬೆಂಗಳೂರು , ಮಂಗಳವಾರ, 1 ಜನವರಿ 2019 (09:48 IST)
ಬೆಂಗಳೂರು: 2018 ರಲ್ಲಿ ಅಭಿಮಾನಿಗಳ ಹಾರ್ಟ್ ಬ್ರೇಕ್ ಮಾಡಿದ ಸುದ್ದಿಗಳಲ್ಲಿ ಒಂದು ಎಂದರೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಆಗಿದ್ದು.


ಆದರೆ ವರ್ಷದ ಕೊನೆಯ ದಿನ ರಶ್ಮಿಕಾ ಮತ್ತೆ ತಮ್ಮ ಕಿರಿಕ್ ಪಾರ್ಟಿ ದಿನಗಳನ್ನು ನೆನೆಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ರಕ್ಷಿತ್ ಶೆಟ್ಟಿ ಸೇರಿದಂತೆ ಕಿರಿಕ್ ಪಾರ್ಟಿ ತಂಡ ಮತ್ತು ತಾವು ಇದುವರೆಗೆ ನಟಿಸಿದ ಚಿತ್ರಗಳ ಸ್ಟಾರ್ ಗಳ ಜತೆಗಿನ ಸುಂದರ ಕ್ಷಣಗಳ ಫೋಟೋವನ್ನು ಪ್ರಕಟಿಸಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

ತಾವು ಇಂಡಸ್ಟ್ರಿಗೆ ಬಂದು ಎರಡು ವರ್ಷವಾದ ಗಳಿಗೆಯಲ್ಲಿ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದ ಸಲ್ಲಿಸಿರುವ ರಶ್ಮಿಕಾ ಕಿರಿಕ್ ಪಾರ್ಟಿಗೆ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ. ರಕ್ಷಿತ್ ಶೆಟ್ಟಿ ಜತೆಗಿನ ಫೋಟೋಕ್ಕೆ ಅಭಿಮಾನಿಗಳು ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಮತ್ತೆ ಈ ಜೋಡಿ ಒಂದಾಗಲಿ ಎಂದು ಈಗಲೂ ಅಭಿಮಾನಿಗಳು ಬಯಸುತ್ತಿದ್ದಾರೆ. ಅದೇನೇ ಇರಲಿ, ರಶ್ಮಿಕಾ ಫೋಟೋ ಕೊಲೇಜ್ ನೋಡಿ ಅಭಿಮಾನಿಗಳಂತೂ ಥ್ರಿಲ್ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಬಳಿಯಿರುವ ದುಬಾರಿ ವಸ್ತು ಯಾವುದು ಮತ್ತು ಅದರ ಬೆಲೆ ಎಷ್ಟು ಗೊತ್ತಾ?!