Publish Date: Mon, 12 Jul 2021 (09:10 IST)
Updated Date: Mon, 12 Jul 2021 (09:18 IST)
ಬೆಂಗಳೂರು: ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಜೊತೆಗಿನ ವೈಮನಸ್ಯವನ್ನು ನಟ ರಕ್ಷಿತ್ ಶೆಟ್ಟಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಅವನೇ ಶ್ರೀಮನ್ನಾರಾಯಣ ಸಿನಿಮಾ ಸೋಲಿನ ಬಳಿಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ಸುದ್ದಿ ಹಬ್ಬಿತ್ತು. ಇದೀಗ ಮೊನ್ನೆ ತಾನೇ ರಕ್ಷಿತ್ ಬಗ್ಗೆ ಪಬ್ಲಿಕ್ ವಾಹಿನಿಯಲ್ಲಿ ಪ್ರಸಾರವಾದ ಅವಹೇಳನಕಾರಿ ಸುದ್ದಿಯ ಹಿಂದೆ ಪುಷ್ಕರ್ ಮತ್ತು ಪತ್ರಕರ್ತ ಮಹೇಶ್ ದೇವಿ ಶೆಟ್ಟಿ ಇದ್ದರು ಎನ್ನುವ ಮೂಲಕ ಸ್ವತಃ ರಕ್ಷಿತ್ ಇಬ್ಬರ ನಡುವಿನ ವೈಮನಸ್ಯವನ್ನು ಒಪ್ಪಿಕೊಂಡಿದ್ದಾರೆ.
ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ನಿರೀಕ್ಷಿಸಿದಷ್ಟು ಹಣ ಬರಲಿಲ್ಲ ಎಂದಾಗ ಪುಷ್ಕರ್ ಬಾಕಿ ಉಳಿಸಿಕೊಂಡಿದ್ದ 2 ಕೋಟಿ ರೂ. ನಾನೇ ಪಾವತಿ ಮಾಡಿದ್ದೇನೆ. ಇದಾದ ಬಳಿಕ ಚಾರ್ಲಿ ಮತ್ತು ಸಪ್ತಸಾಗರದಾಚೆಯೆಲ್ಲೊ ಸಿನಿಮಾಗೆ ಪುಷ್ಕರ್ ಹೂಡಿದ್ದ ಹಣವನ್ನು ನಾನೇ ಅವರಿಗೆ ಹಿಂತಿರುಗಿಸಿದ್ದೇನೆ. ಹಾಗಿದ್ದರೂ ಪತ್ರಕರ್ತ ಮಹೇಶ್ ಗೆ ಹೇಳಿ ನನ್ನ ವಿರುದ್ಧವೇ ಸುದ್ದಿ ಮಾಡಿದ್ದಾರೆ ಎಂದು ರಕ್ಷಿತ್ ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾ ಓಡಲಿಲ್ಲ ಎಂದ ತಕ್ಷಣ ಬೆನ್ನ ಹಿಂದೆ ಮಾತನಾಡುವ ವ್ಯಕ್ತಿ ಎಂದು ಪುಷ್ಕರ್ ವಿರುದ್ಧ ನಿನ್ನೆ ಸಂಜೆ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.