Webdunia - Bharat's app for daily news and videos

Install App

ಈ ಹೀರೋಯಿನ್ ಜೊತೆ ಒಟ್ಟಿಗೇ ಪ್ರಯಾಣಿಸಿದ ರಕ್ಷಿತ್ ಶೆಟ್ಟಿ: ಸಮ್ ಥಿಂಗ್ ಸಮ್ ಥಿಂಗಾ ಎಂದ ಫ್ಯಾನ್ಸ್

Krishnaveni K
ಶನಿವಾರ, 5 ಅಕ್ಟೋಬರ್ 2024 (09:31 IST)
ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಅವರು ಯಾವುದೇ ಹುಡುಗಿ ಜೊತೆ ಇದ್ದರೂ ಅವರೊಂದಿಗೆ ಲಿಂಕ್ ಅಪ್ ಶುರುವಾಗುತ್ತಿದೆ. ಇದೀಗ ರಕ್ಷಿತ್ ವಿಮಾನ ನಿಲ್ದಾಣದಲ್ಲಿ ಹೀರೋಯಿನ್ ಜೊತೆ ಕಣ್ಣಿಗೆ ಬಿದ್ದಿದ್ದು ಫ್ಯಾನ್ಸ್ ಆಗಲೇ ಗುಸು ಗುಸು ಶುರು ಮಾಡಿದ್ದಾರೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇತ್ತೀಚೆಗೆ ದುಬೈಗೆ ಐಐಎಫ್ಎ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದರು. ಈ ವೇಳೆ ಅವರ ಜೊತೆ ಸಪ್ತಸಾಗರದಾಚೆ ಎಲಲೊ ಸಿನಿಮಾದಲ್ಲಿ ನಟಿಸಿದ್ದ ರುಕ್ಮಿಣಿ ವಸಂತ್ ಕೂಡಾ ಜೊತೆಗಿದ್ದರು. ಇಬ್ಬರೂ ಏರ್ ಪೋರ್ಟ್ ನಲ್ಲಿ ಏಕಾಂತದಲ್ಲಿ ಕುಳಿತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನು ನೋಡಿ ನೆಟ್ಟಿಗರು ರಶ್ಮಿಕಾ ಹೋದ್ಳು ರುಕ್ಮಿಣಿ ಬಂದಳು ಎಂದು ಟ್ರೋಲ್ ಮಾಡಿದ್ದಾರೆ. ಸಪ್ತಸಾಗರದಾಚೆ ಎಲ್ಲೊ ಸಿನಿಮಾದಲ್ಲಿ ಇಬ್ಬರೂ ಜೋಡಿಯಾಗಿ ಅಭಿಮಾನಿಗಳ ಮನಗೆದ್ದಿದ್ದರು. ಆಗಲೇ ಕೆಲವರು ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂದು ಗುಲ್ಲು ಹಬ್ಬಿಸಿದ್ದರು.

ನಿಜವಾಗಿಯೂ ಡೇಟಿಂಗ್ ಮಾಡ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಇಬ್ಬರ ಜೋಡಿ ನೋಡಿ ಅಭಿಮಾನಿಗಳಂತೂ ರಕ್ಷಿತ್ ಗೆ ಕ್ಯೂಟ್ ಹುಡುಗೀನೇ ಸಿಕ್ಕಿದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದರು. ಇಬ್ಬರೂ ಸಪ್ತಸಾಗರದಾಚೆ ಎಲ್ಲೊ ಸಿನಿಮಾಗೆ ಸಿಕ್ಕ ಪ್ರಶಸ್ತಿ ಪಡೆಯಲು ದುಬೈಗೆ ಹೋಗುವಾಗ ಈ ರೀತಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಮುಂದಿನ ಸುದ್ದಿ
Show comments