Select Your Language

Notifications

webdunia
webdunia
webdunia
webdunia

ಸತ್ಯಜಿತ್ ನೆರವಿಗೆ ದೊಡ್ಮನೆ ಹುಡುಗರು

ಸತ್ಯಜಿತ್ ನೆರವಿಗೆ ದೊಡ್ಮನೆ ಹುಡುಗರು
ಬೆಂಗಳೂರು , ಮಂಗಳವಾರ, 1 ನವೆಂಬರ್ 2016 (14:59 IST)
ಬೆಂಗಳೂರು: ಗಾಂಗ್ರಿನ್ ನಿಂದಾಗಿ ಕಾಲು ಕಳೆದುಕೊಂಡು ಅಸಹಾಯಕರಾಗಿ ನೆರವಿಗಾಗಿ ಮನವಿ ಮಾಡುತ್ತಿರುವ ಕನ್ನಡದ ಪೋಷಕ ನಟ ಸತ್ಯಜಿತ್ ಗೆ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನೆರವು ಮಾಡಿದ್ದಾರೆ.

ಇವರಬ್ಬರೂ ಸ್ಟಾರ್ ನಟರು ಸತ್ಯಜಿತ್ ಗೆ 2 ಲಕ್ಷ ರೂ. ನೆರವು ನೀಡಿದ್ದಾರೆ. ಅದೇ ರೀತಿ ಸುದೀಪ್ ಅಭಿಮಾನಿಗಳ ಸಂಘದವರೂ 50 ಸಾವಿರ ನಗದು ನೀಡಿ ಕೃತಕ ಕಾಲು ಜೋಡಣೆಗೆ ಸಹಾಯ ಮಾಡಿದ್ದಾರೆ.

ಇದಲ್ಲದೆ, ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಲಭಿಸಿದೆ. ಹೀಗಾಗಿ ಕೃತಕ ಕಾಲು ಜೋಡಣೆಗೆ ಚಿತ್ರ ರಂಗದವರು ಸ್ಪಂದಿಸಿದ ರೀತಿ ಶ್ಲಾಘನೀಯ. ಕಾಲು ಜೋಡಿಸಿದರೆ ಜೀವನ ನಿರ್ವಹಣೆಗೆ ಮತ್ತೆ ಬಣ್ಣ ಹಚ್ಚಲು ಸಾಧ್ಯವಾಗಬಹುದು ಎನ್ನುವುದು ಅವರ ಲೆಕ್ಕಾಚಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುವರ್ಣದಲ್ಲಿ ಬರ್ತಾಳೆ “ನೀಲಿ”