Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ರಜಿನಿಕಾಂತ್ ಸೆಲ್ಫಿ ವಿಡಿಯೋ ವೈರಲ್

ಅಮೆರಿಕದಲ್ಲಿ ರಜಿನಿಕಾಂತ್ ಸೆಲ್ಫಿ ವಿಡಿಯೋ ವೈರಲ್
ನ್ಯೂಯಾರ್ಕ್ , ಗುರುವಾರ, 6 ಜುಲೈ 2017 (17:24 IST)
ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ. ಅಮೆರಿಕಕ್ಕೆ ಸಾಮಾನ್ಯ ಆರೋಗ್ಯ ಪರೀಕ್ಷೆಗೆ ತೆರಳಿರುವ ರಜಿನಿಕಾಂತ್ ಅಲ್ಲಿಂದಲೇ ಸೆಲ್ಫಿ ವಿಡಿಯೋ ಮಾಡಿ ಫೇಸ್ಬುಕ್`ಗೆ ಪೋಸ್ಟ್ ಮಾಡಿದ್ದಾರೆ.
 

ಇದೇ ಮೊದಲ ಬಾರಿಗೆ ರಜಿನಿಕಾಂತ್ ಸೆಲ್ಫಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ಧಾರೆ. ಫೆರಾರಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ರಜಿನಿ ಸೆಲ್ಫಿ ವಿಡಿಯೋ ಮಾಡುವುದು ಹೇಗೆ? ರೆಡ್ ಬಟನ್ ಒತ್ತಬೇಕೆ ಎಂದು ಡ್ರೈವರನ್ನ ಕೇಳುತ್ತಾರೆ. ಡ್ರೈವರ್ ರಜಿನಿಗೆ ಸೂಚನೆಗಳನ್ನ ನೀಡುತ್ತಾರೆ.

ಇತ್ತೀಚೆಗೆ ಮುಂಬೈನಲ್ಲಿ ಶೂಟಿಂಗ್`ನಲಿ ತೊಡಗಿದ್ದ ರಜಿನಿಕಾಂತ್ ಇದ್ದಕ್ಕಿದ್ದಂತೆ ಅಮೆರಿಕಕ್ಕೆ ತೆರಳಿದ್ದರು. ಹೀಗಾಗಿ, ಅವರ ಆರೋಗ್ಯದ ಬಗ್ಗೆ ವದಂತಿಗಳೂ ಹಬ್ಬಿದ್ದವು. ಈ ಮಧ್ಯೆ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾನಿ ರಜಿನಿ ವಿರುದ್ಧ ಟೀಕಾಪ್ರಹಾರಗೈದಿದ್ದರು. ಅಮೆರಿಕದಲ್ಲಿ ರಜಿನಿಕಾಂತ್ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ರಜಿನಿಕಾಂತ್ ಸೆಲ್ಫಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.




ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂಗಿನ ಬಳಿಕ ಮತ್ತೆ ತುಟಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಪ್ರಿಯಾಂಕಾ