Publish Date: Fri, 21 Aug 2026 (11:11 IST)
Updated Date: Fri, 21 Aug 2026 (11:14 IST)
ಬೆಂಗಳೂರು: ಮಗಳು ರಿಷಿಕಾ ಸಿಂಗ್ ಟಾಕ್ಸಿಕ್ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾ ಬಗ್ಗೆ, ಯಶ್ ಬಗ್ಗೆ ಹೀನಾಮಾನವಾಗಿ ಕಾಮೆಂಟ್ ಮಾಡಿದ್ದರ ಬಗ್ಗೆ ತಂದೆ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ.
ಟಾಕ್ಸಿಕ್ ಸಿನಿಮಾ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ರಿಷಿಕಾ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮನೆಯಲ್ಲಿ ಹೆಂಡ್ತಿ ಇಟ್ಟುಕೊಂಡು ಪ್ಯಾಂಟ್ ಬಿಚ್ಚೋ ಸೀನ್ ಮಾಡ್ತೀಯಾ ಕಂದ ಎಂದು ವ್ಯಂಗ್ಯ ಮಾಡಿದ್ದರು. ಅವರ ವಿಡಿಯೋಗಳಿಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಇದರ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ರಾಜೇಂದ್ರ ಸಿಂಗ್ ಬಾಬು ನನಗೂ ಅದಕ್ಕೂ ಸಂಬಂಧವಿಲ್ಲ. ಯಶ್ ಟಾಕ್ಸಿಕ್ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿರುವ ರಾಜೇಂದ್ರ ಸಿಂಗ್ ಬಾಬು ಮಗಳ ಪ್ರಶ್ನೆ ಬಂದಾಗ ಅದರ ಬಗ್ಗೆ ನಾನೇನೂ ಹೇಳಲ್ಲ ಎಂದಿದ್ದಾರೆ.
ಆ ಕಾಮೆಂಟ್ ಗಳಿಗೂ ನನಗೂ ಸಾಧ್ಯವಿಲ್ಲ ಅದರ ಬಗ್ಗೆ ನಾನೇನೂ ಹೇಳಲ್ಲ. ಅವರವರ ಕಾಮೆಂಟ್ ಗಳು ಎಂದು ಸ್ಪಷ್ಟವಾಗಿ ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಆದರೆ ರಾಜೇಂದ್ರ ಸಿಂಗ್ ಬಾಬು ಇದುವರೆಗೂ ಯಶ್ ಬೆಳವಣಿಗೆ ಬಗ್ಗೆ ಹೊಗಳುತ್ತಲೇ ಬಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ