ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತೆ ಆಕ್ಷನ್ ಕಟ್‌ಗೆ ಮರಳಿದ್ದಾರೆ. ಇಷ್ಟು ದಿನ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ, ಅಲ್ಲಿನ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಬರುತ್ತಿದ್ದರು. ಆದರೆ ಅದ್ಯಾಕೋ ಏನೋ ಚಿತ್ರ ನಿರ್ದೇಶಿಸುವ ಸಾಹಸಕ್ಕೆ ಕೈಹಾಕಿರಲಿಲ್ಲ.
ಈಗ ಮತ್ತೆ ಅವರು ಆಕ್ಷನ್ ಕಟ್‌ಗೆ ಮರಳಿರುವುದು ಚಿತ್ರರಂಗದಲ್ಲಿ ಹೊಸ ಗಾಳಿ ಬೀಸಿದಂತಾಗಿದೆ. ಅವರ ಹೊಸ ಚಿತ್ರದ ಹೆಸರು ಕನ್ನಡ ಆಭರಣ ಕಾಳಿಂಗರಾವ್. ಆದರೆ ಇದು ಕಮರ್ಷಿಯಲ್ ಸಿನಿಮಾ ಅಲ್ಲ, ಬದಲಾಗಿ ಖ್ಯಾತ ಸುಗಮ ಸಂಗೀತ ಮತ್ತು ಭಾವಗೀತೆಗಳ ಸಂಗೀತ ಸಂಯೋಜಕ ಪಿ ಕಾಳಿಂಗ ರಾವ್ ಕುರಿತಾದ ಬಯೋಪಿಕ್.
ವಿಶೇಷ ಎಂದರೆ ಕಮರ್ಷಿಯಲ್ ಚಿತ್ರಗಳಿಗೆ ಹೆಸರಾಗಿರುವ ರಾಕ್‍ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಪಕರು. ಹೆಸರಾಂತ ಹಿನ್ನೆಲೆ ಗಾಯಕರೊಲ್ಲಬ್ಬರು, ಸಂಗೀತ ನಿರ್ದೇಶಕರು ಹಾಗು ಕನ್ನಡದಲ್ಲಿನ ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದವರು. ಇವರ ಪೂರ್ಣ ಹೆಸರು, ಪಾಂಡೇಶ್ವರ ಕಾಳಿಂಗರಾಯ.ಮೂಲತಃ ಇವರು ಬಾರಕೂರಿನ ಮೂಡುಕೆರೆಯವರು.
ಅಬ್ಬಾ ಆ ಹುಡುಗಿ (1956) ಮತ್ತು ಮಹಾಶಿಲ್ಪಿ (1966) ಚಿತ್ರಗಳಿಗೆ ಸಂಗೀತ ನೀಡಿದರೂ ರಾಯರ ಪ್ರತಿಭೆ ಹೆಚ್ಚಾಗಿ ಬೆಳಗಿದ್ದು ಸುಗಮ ಸಂಗೀತ ಕ್ಷೇತ್ರದಲ್ಲಿಯೇ. ಓಂ ನಮೋ ನಾರಾಯಣ(ಕೈವಾರ ಮಹಾತ್ಮೆ), ತಾಯಿ ದೇವಿಯನು ಕಾಣೆ ಹಂಬಲಿಸಿ (ಕಿತ್ತೂರು ಚೆನ್ನಮ್ಮ) ಮೊದಲಾದ ಜನಪ್ರಿಯ ಗೀತೆಗಳನ್ನು ತಮ್ಮ ಕಂಠಸಿರಿಯಿಂದ ಬೆಳ್ಳಿತೆರೆಗೆ ನೀಡಿದ ರಾಯರು ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಅವರ ಪ್ರಸಿದ್ಧ ಗೀತೆ 'ಅಂತಿಂಥ ಹೆಣ್ಣು ನಾನಲ್ಲ'ವನ್ನು ಅವರೇ ಹಾಡುತ್ತಿರುವಂತೆ ತುಂಬಿದ ಕೊಡ ಚಿತ್ರದಲ್ಲಿ ತೋರಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.