Publish Date: Fri, 21 Oct 2016 (09:28 IST)
Updated Date: Fri, 21 Oct 2016 (10:23 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಆರೋಗ್ಯ ತಪಾಸಣೆಗಾಗಿ ಅಮೆರಿಕಾ ದೇಶಕ್ಕೆ ತೆರಳಿದ್ದಾರೆ.
ಅವರು ಆರೋಗ್ಯವಾಗಿದ್ದು, ಇದೊಂದು ಸಾಮಾನ್ಯ ತಪಾಸಣೆಯಷ್ಟೆ ಎಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ. ಕೆ. ಶಂಕರ್ ಅವರ ಸಿನಿಮಾ “ಎಂಥಿರನ್” ಚಿತ್ರದ ಎರಡನೇ ಭಾಗ “2.ಒ” ದಲ್ಲಿ ರಜನಿ ಅಭಿನಯಿಸುತ್ತಿದ್ದು, ಚಿತ್ರದ ಮಾತಿನ ಭಾಗ ಚಿತ್ರೀಕರಣ ಮುಗಿಸಿದ ಬಳಿಕ ರಜನಿ ವಿದೇಶದ ವಿಮಾನ ಏರಿದ್ದಾರೆ.
ಎರಡು ವಾರಗಳೊಳಗೆ ವಾಪಸ್ ಬಂದು ಕಬಾಲಿ ಚಿತ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಅವರು ಭರವಸೆ ನೀಡಿರುವುದಾಗಿ ಮೂಲಗಳು ಹೇಳಿವೆ.
ಈವರ್ಷ ಜೂನ್ ತಿಂಗಳಲ್ಲಿ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಾಗಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆದಿದ್ದರು. ಪುತ್ರಿ ಐಶ್ವರ್ಯ ಜತೆಗೆ ಅವರು ಅಮೆರಿಕದಲ್ಲಿ ಕೆಲವು ದಿನಗಳಿದ್ದು, ನಂತರ ಕಬಾಲಿ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ