ಹೈದರಾಬಾದ್: ಬಾಹುಬಲಿ 2 ಚಿತ್ರ 1000 ಕೋಟಿ ರೂ. ಬಾಚಿಕೊಂಡು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜನ ಬಾಹುಬಲಿ ಸಿನಿಮಾ ಬಗ್ಗೆ ಇಷ್ಟೊಂದು ಕ್ರೇಜ್ ಹೊಂದಿರುವಾಗ ರಾಜಮೌಳಿಗೆ ಮೂರನೇ ಭಾಗ ಮಾಡುವ ಆಸಕ್ತಿ ಬಂದಿದೆಯಾ? ಹೀಗೊಂದು ಪ್ರಶ್ನೆಯನ್ನು ಅವರಿಗೆ ಸಂದರ್ಶನವೊಂದರಲ್ಲಿ ಕೇಳಲಾಯ್ತು.
ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ ಹಾಗೂ ಅಮರೇಂದ್ರ ಬಾಹುಬಲಿಯ ಸಾವಿಗೆ ಮಗ ಮಹೇಂದ್ರ ಬಾಹುಬಲಿ ಸೇಡು ತೀರಿಸಿಕೊಳ್ಳುವ ಮೂಲಕ ಎರಡನೇ ಭಾಗ ಮುಕ್ತಾಯಗೊಂಡಿದೆ. ಇದೀಗ ಬಾಹುಬಲಿಗೆ ಒಂದು ರೀತಿಯ ಅಂತ್ಯ ಸಿಕ್ಕಿದೆ.
ಇನ್ನು ಮೂರನೇ ಭಾಗ ಮಾಡಬೇಕಾದರೆ ಅದಕ್ಕೊಂದು ಹೊಸ ಕತೆ ಹುಡುಕಬೇಕು. ಅದು ಅಷ್ಟು ಸುಲಭವಲ್ಲ ಎನ್ನುವುದು ರಾಮೌಳಿ ಮಾತು. ಹಾಗಿದ್ದರೂ ಒಂದು ವೇಳೆ ತಮ್ಮ ತಂದೆ ಬಾಹುಬಲಿ ಸಿನಿಮಾದದ ಕತೆಗಾರ ವಿಜಯೇಂದ್ರ ಪ್ರಸಾದ್ ಮೂರನೇ ಭಾಗಕ್ಕೆ ಸಶಕ್ತ ಕತೆ ಹೆಣೆದು ತಂದರೆ ಬಾಹುಬಲಿ 3 ಬಂದರೂ ಅಚ್ಚರಿಯಿಲ್ಲ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ