Publish Date: Mon, 12 Dec 2016 (11:54 IST)
Updated Date: Mon, 12 Dec 2016 (11:59 IST)
ಕಳೆದ ನಾಲ್ಕು ವರ್ಷಗಳಿಂದ ಕೇವಲ ಒಂದೇ ಒಂದು ಸಿನಿಮಾದಲ್ಲಿ ತೊಡಗಿಕೊಂಡಿರುವ ಟಾಲಿವುಡ್ ಹೀರೋ ಪ್ರಭಾಸ್‌ಗೆ ಕಡೆಗೂ ಮುಕ್ತಿ ಸಿಕ್ಕಿದೆ. ಇಲ್ಲಿಯವರೆಗೆ ಪ್ರಮುಖ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿರುವ ಬಾಹುಬಲಿ ಡಿಸೆಂಬರ್ 27ಕ್ಕೆ ಶೂಟಿಂಗ್‌ಗೆ ಪ್ಯಾಕಪ್ ಹೇಳಲಿದೆ.
ಬಾಹುಬಲಿ ಮೊದಲ ಭಾಗ ಸೂಪರ್ ಹಿಟ್ ಆಗುವುದರೊಂದಿಗೆ ಇದೀಗ ಬರುತ್ತಿರುವ ಪಾರ್ಟ್ 2 ಬಗ್ಗೆ ಭಾರಿ ನಿರೀಕ್ಷೆಗಳಿವೆ. ಅದಕ್ಕೆ ತಕ್ಕಂತೆ ಅದ್ದೂರಿಯಾಗಿ ಚಿತ್ರವನ್ನು ತೆರೆಗೆ ತರಲಾಗುತ್ತಿದ್ದು, ತಂತ್ರಜ್ಞಾನ, ಮೇಕಿಂಗ್ ಎಲ್ಲವನ್ನೂ ಅದ್ಭುತವಾಗಿ ತರುತ್ತಿದೆ ಚಿತ್ರತಂಡ.
ಡಿ.27ರಿಂದ ಶೂಟಿಂಗ್‌ಗೆ ಪ್ಯಾಕಪ್ ಹೇಳಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಳ್ಳಲಿದೆ. ಪ್ರಭಾಸ್ ಕೂಡ ಸ್ವಲ್ಪ ರೆಸ್ಟ್ ತೆಗೆದುಕೊಂಡು ಮತ್ತೊಂದು ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರಂತೆ. ಇದೇ ಸಂದರ್ಭದಲ್ಲಿ ತನ್ನ ಮದುವೆ ಬಗ್ಗೆ ಸಹ ಮಾತನಾಡುವ ಸಾಧ್ಯತೆಗಳಿವೆಯಂತೆ. ನಾಲ್ಕು ವರ್ಷಗಳಿಂದ ಒಂದೇ ಸಿನಿಮಾದಲ್ಲಿ ತೊಡಗಿಕೊಳ್ಳುವ ಮೂಲಕ ಪ್ರಭಾಸ್ ಭಾರತೀಯ ಚಿತ್ರರಂಗದಲ್ಲಿ ಎಲ್ಲರ ಗಮನಸೆಳೆಯುವ ನಟನಾಗಿ ಬೆಳೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.