Publish Date: Mon, 12 Dec 2016 (11:50 IST)
Updated Date: Mon, 12 Dec 2016 (11:54 IST)
ತಮಿಳು ಸ್ಟಾರ್ ಸಿಯಾನ್ ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ಸಾಕಷ್ಟು ಹೀರೋಯಿನ್‌ಗಳು ಸಾಲು ನಿಲ್ಲುತ್ತಾರೆ. ಆದರೆ ಈ ಸಲ ಮಾಲಿವುಡ್ ಬ್ಯೂಟಿ ಮಂಜಿಮಾ ಮೋಹನ್ ರೆಡಿಯಾಗುತ್ತಿದ್ದಾರೆ ಎಂಬುದು ತಾಜಾ ಸಮಾಚಾರ. ಈ ಬೆಡಗಿಗೆ ಕೋಲಿವುಡ್‌ನಲ್ಲಿ ಸಾಕಷ್ಟು ಅವಕಾಶಗಳು ಹರಿದುಬರುತ್ತಿವೆ.
ಒಂದೆರಡು ಮಲಯಾಳಂ ಚಿತ್ರಗಳಲ್ಲಿಅಭಿನಯಿಸಿರುವ ನಾಯಕಿಯರಿಗೆ ಕೋಲಿವುಡ್‍ನಲ್ಲಿ ಒಳ್ಳೇ ಬೇಡಿಕೆ ಇದೆ. ಅಸಿನ್, ನಯನತಾರಾ ಇವರೆಲ್ಲಾ ಮಾಲಿವುಡ್‌ನಿಂದ ಬಂದ ತಾರೆಗಳೇ. ಇದೀಗ ಈ ಮಂಜಿ ಮೋಹನ್ ಹೊಸ ಸೇರ್ಪಡೆ. ಶಿಂಬು ನಾಯಕನಾಗಿದ್ದ ಅಚ್ಚಂ ಎನ್ಬದು ಮಡಮೈಯಡಾ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಅಡಿಯಿಟ್ಟಿದ್ದರು ಮಂಜಿಮಾ ಮೋಹನ್.
ಆದರೆ ಆ ಸಿನಿಮಾ ಕೆಲವೊಂದು ವಿವಾದಗಳ ಕಾರಣ ತೆರೆಗೆ ಬರಲು ತಡವಾಯಿತು. ಏತನ್ಮಧ್ಯೆ ಮಂಜಿಮಾ ಇನ್ನೊಂದು ಚಿತ್ರ ಒಪ್ಪಿಕೊಂಡರು. ಮೊದಲ ಚಿತ್ರ ಮಡಮೈಯಡಾ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಮೊದಲ ಚಿತ್ರದಲ್ಲೇ ಅದೃಷ್ಟದ ತಾರೆ ಎಂಬ ಮುದ್ರೆ ಬಿತ್ತು. ಸಾಲುಸಾಲು ಅವಕಾಶಗಳು ಅವರನ್ನು ವರಿಸಿವೆ. ವಿಕ್ರಮ್ ಜೊತೆ ಸಾಕಷ್ಟು ನಟಿಯರು ಅಭಿನಯಿಸಲು ಪೈಪೋಟಿ ಪಡುತ್ತಿದ್ದರೂ, ಆ ಸುವರ್ಣಾವಕಾಶ ಮಂಜಿಮಾ ಮೋಹನ್‌ಗೆ ಸಿಕ್ಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.