ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದಾರೆ ಎಂದು ಅವರ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಈ ನಡುವೆ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆಂದು ರಾಜ್ ಬಿ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಿತ್ತು. ಅದಾದ ಬಳಿಕ ರಕ್ಷಿತ್ ಶೆಟ್ಟಿ ನಾಪತ್ತೆಯಾಗಿದ್ದರು. ಚಾರ್ಲಿ 777, ಸಪ್ತಸಾಗರದಾಚೆ ಎಲ್ಲೊದಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ಮೇಲೆ ರಕ್ಷಿತ್ ಎಲ್ಲಿ ಹೋದ್ರು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು.
ಮೊನ್ನೆಯಷ್ಟೇ ರಕ್ಷಿತ್ ಬರ್ತ್ ಡೇ ದಿನವೂ ಅಭಿಮಾನಿಗಳು ಈವತ್ತಾದ್ರೂ ಸಿನಿಮಾ ಸುದ್ದಿ ಕೊಡಿ ಎಂದಿದ್ದರು. ಆದರೆ ರಕ್ಷಿತ್ ಕಡೆಯಿಂದ ಯಾವುದೇ ಸುದ್ದಿ ಬಂದಿರಲಿಲ್ಲ. ಆದರೆ ಈಗ ರಕ್ಷಿತ್ ಮುಂದಿನ ಸಿನಿಮಾ ಬಗ್ಗೆ ರಾಜ್ ಬಿ ಶೆಟ್ಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಕ್ಷಿತ್ ಈಗ ಸಿನಿಮಾವೊಂದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ಮುಗಿಸಲು ಅವರಿಗೆ ಎರಡೂವರೆ ವರ್ಷ ಸಮಯ ಬೇಕು. ಇದಾದ ಬಳಿಕ ರಕ್ಷಿತ್, ರಿಷಭ್ ಜೊತೆ ಸಿನಿಮಾ ಮಾಡುತ್ತೇನೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.