Publish Date: Fri, 11 Sep 2020 (12:35 IST)
Updated Date: Fri, 11 Sep 2020 (12:37 IST)
ಬೆಂಗಳೂರು: ಡ್ರಗ್ ಮಾಫಿಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ನಡುವೆ ಸಾಂತ್ವನ ಕೇಂದ್ರದಲ್ಲಿ ಕಿತ್ತಾಟ ನಡೆದಿದ್ದ ವಿಚಾರ ಓದಿರುತ್ತೀರಿ. ಈ ನಟಿಯರ ವಿರುದ್ಧ ಕಿತ್ತಾಟ ನಡೆದಿದ್ದು ಇದೇ ಮೊದಲಲ್ಲ.
ಇದಕ್ಕೂ ಮೊದಲು ಸಿಸಿಎಲ್ ಕ್ರಿಕೆಟ್ ಟೂರ್ನಿಯ ಫೋಟೋ ಶೂಟ್ ಸಂದರ್ಭದಲ್ಲಿಯೇ ಇಬ್ಬರೂ ಕಾಸ್ಟ್ಯೂಮ್ ವಿಚಾರಕ್ಕಾಗಿ ಕಿತ್ತಾಡಿಕೊಂಡಿದ್ದರು ಎನ್ನಲಾಗಿದೆ. ಪಂಜಾಬ್ ಮೂಲದವರಾದ ಇಬ್ಬರೂ ನಟಿಯರ ಕೋಳಿ ಜಗಳ ಆಗಲೇ ಶುರುವಾಗಿತ್ತು. ಅದೀಗ ಬಂಧನದವರೆಗೂ ಮುಂದುವರಿದಿದೆ. ಆದರೆ ಮಾಧ‍್ಯಮಗಳ ಎದುರು ನಿನ್ನೆ ಮಾತ್ರ ಇಬ್ಬರೂ ಭಾರೀ ಸ್ನೇಹಿತರಂತೆ ಮಾತನಾಡುತ್ತಿದ್ದ ದೃಶ್ಯ ಕಂಡುಬಂದಿತ್ತು. ಒಳಗಿನ ಗುಟ್ಟು ಶಿವನೇ ಬಲ್ಲ!