Publish Date: Wed, 16 Sep 2020 (10:20 IST)
Updated Date: Wed, 16 Sep 2020 (10:25 IST)
ಬೆಂಗಳೂರು: ಡ್ರಗ್ ಮಾಫಿಯಾದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರದಲ್ಲಿ ವಿಚಾರಾಧೀನ ಖೈದಿಯಾಗಿ ಕಳೆಯುತ್ತಿರುವ ನಟಿ ರಾಗಿಣಿ ದ್ವಿವೇದಿ ಊಟದ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ.
ರಾಗಿಣಿ ಜೈಲಿನಲ್ಲಿ ನೀಡುತ್ತಿರುವ ಊಟ ಸರಿಯಾಗಿಲ್ಲ ಎಂದು ತಕರಾರು ತೆಗೆದಿದ್ದರು ಎನ್ನಲಾಗಿದೆ. ಮೊನ್ನೆ ರಾತ್ರಿ ಉಪವಾಸವಿದ್ದ ರಾಗಿಣಿ ಅಸ್ವಸ್ಥರಾಗಿದ್ದರು. ಬಳಿಕ ಜೈಲಿನ ಆರೋಗ್ಯಾಧಿಕಾರಿಗಳೇ ಅವರಿಗೆ ಚಿಕಿತ್ಸೆ ನೀಡಿದ್ದರು. ಅಲ್ಲದೆ ಊಟ ಸೇವಿಸುವಂತೆ ಹೇಳಿದ್ದರು. ಇದಾದ ಬಳಿಕ ಚಪಾತಿ ಸೇವಿಸಿದ್ದರು ಎನ್ನಲಾಗಿದೆ.