Select Your Language

Notifications

webdunia
webdunia
webdunia
webdunia

ತಿಥಿ, ಗೋಧಿ ಬಣ್ಣ ನಿರ್ದೇಶನಕರಿಗೆ ಪ್ರಶಸ್ತಿ ಗೌರವ

ತಿಥಿ, ಗೋಧಿ ಬಣ್ಣ ನಿರ್ದೇಶನಕರಿಗೆ ಪ್ರಶಸ್ತಿ ಗೌರವ
Bangalore , ಬುಧವಾರ, 11 ಜನವರಿ 2017 (09:49 IST)
ರಾಮ್ ರೆಡ್ಡಿ ನಿರ್ದೇಶನದ ತಿಥಿ ಚಿತ್ರ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರವಾಗಿದೆ. ಅದೇ ರೀತಿ 2016ರಲ್ಲಿ ತೆರೆಕಂಡ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಸಹ ಅಷ್ಟೇ. ಇತ್ತೀಚೆಗೆ ಈ ಎರಡೂ ಚಿತ್ರ ನಿರ್ದೇಶಕರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟಿಸಲಾಗಿದ್ದು, ಜನವರಿ 28ರಂದು ಪ್ರದಾನ ಮಾಡಲಾಗುತ್ತಿದೆ.
 
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಹೇಮಂತ್ ರಾವ್ ಅವರು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸಹ ಇದೇ ಚಿತ್ರದ ಚರಣ್‌ರಾಜ್ ಅವರಿಗೆ ಸಂದಿದೆ. ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ರಾಮ ರಾಮ ರೇ ಚಿತ್ರದ ಸಿದ್ದಗಂಗಯ್ಯ ಕಂಬಳು ಅವರಿಗೆ ಸಿಕ್ಕಿದೆ.
 
ನೀರ್ ದೋಸೆಯ "ಹೋಗಿ ಬಾ ಬೆಳಕೆ" ಹಾಡಿನ ಸಾಹಿತ್ಯ ಅತ್ಯುತ್ತಮ ಪ್ರಶಸ್ತಿಯನ್ನು ವಿಜಯ್ ಪ್ರಸಾದ್ ಅವರಿಗೆ ಕೊಟ್ಟು ಸನ್ಮಾನಿಸಲಾಗುತ್ತಿದೆ. ಒಟ್ಟು 11 ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಇದು 15ನೇ ವಾರ್ಷಿಕ ಪ್ರಶಸ್ತಿಯಾಗಿದ್ದು, ಸಿನಿಮಾ ಪ್ರಚಾರಕರ್ತ ಡಿ.ವಿ ಸುಧೀಂದ್ರ ಅವರ ಸ್ಮರಣಾರ್ಥ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಎರಡನೇ ಸಲ’ ಧನಂಜಯ್ ಟವಲ್ ಫೈಟಿಂಗ್