Select Your Language

Notifications

webdunia
webdunia
webdunia
webdunia

’ಎರಡನೇ ಸಲ’ ಧನಂಜಯ್ ಟವಲ್ ಫೈಟಿಂಗ್

’ಎರಡನೇ ಸಲ’ ಧನಂಜಯ್ ಟವಲ್ ಫೈಟಿಂಗ್
Bangalore , ಬುಧವಾರ, 11 ಜನವರಿ 2017 (09:35 IST)
ಶಾಲು, ಟವಲ್‌ಗಳನ್ನು ಜೋರಾಗಿ ಬೀಸಿದರೆ ಸಾಕು ಎದುರಾಳಿಗಳು ತರಗೆಲೆ ತರ ಹಾರಾಡಿಕೊಂಡು ಹೋಗೋದನ್ನ ರಜನಿಕಾಂತ್ ಸಿನಿಮಾಗಳಲ್ಲಿ ನೋಡೋ ಇರುತ್ತೀರ. ಈಗ ನಟ ಧನಂಜಯ್ ಟವೆಲ್‌ನಲ್ಲಿ ಸ್ವಲ್ಪ ಭಿನ್ನವಾಗಿಯೇ ಫೈಟ್ ಮಾಡಿದ್ದಾರಂತೆ.
 
ಮಠ ಗುರುಪ್ರಸಾದ್ ಆಕ್ಷನ್ ಕಟ್ ಹೇಳುತ್ತಿರುವ ’ಎರಡನೇ ಸಲ’ ಚಿತ್ರಕ್ಕಾಗಿ ಈ ಫೈಟಿಂಗ್ ಸೀನ್. ಈ ಬಗ್ಗೆ ಮಾತನಾಡಿರುವ ಧನಂಜಯ್, ಚಿತ್ರದಲ್ಲಿ ಸಾಕಷ್ಟು ಕಾಮಿಡಿ ಅಂಶಗಳಿವೆ. ಅದರಲ್ಲಿ ಕಾಮಿಡಿ ಸನ್ನಿವೇಶವೂ ಒಂದು. ಇಲ್ಲಿ ನಾನು ಫೈಟ್ ಮಾಡುವುದಕ್ಕೆ ಬಳಸಿರುವುದು ಲಾಂಗು ಮಚ್ಚು ಅಲ್ಲ, ಟವೆಲ್ ಎಂದಿದ್ದಾರೆ.
 
ಈ ರೀತಿಯ ಪಾತ್ರ ಮಾಡಿರುವುದು ಇದೆ ಮೊದಲು. ಹಾಗಾಗಿ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಎನ್ನುತ್ತಾರೆ ಧನಂಜಯ್. ಈ ಚಿತ್ರದ ನಾಯಕಿ ಸಂಗೀತಾ ಭಟ್. ಇನ್ನೊಂದು ವಿಶೇಷವೆಂದರೆ ಹಿರಿಯ ನಟಿ ಲಕ್ಷ್ಮಿ ಅವರು ಅಭಿನಯಿಸುತ್ತಿರುವುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವರ್ಕೌಟ್ ಮಾಡಿ ಗಾಯಗೊಂಡ ಚಾಲೆಂಜಿಂಗ್ ಸ್ಟಾರ್