Publish Date: Sun, 03 Dec 2017 (09:25 IST)
Updated Date: Sun, 03 Dec 2017 (09:27 IST)
ಬೆಂಗಳೂರು: ಮದುವೆ ನಂತರ ರಾಧಿಕಾ ಪಂಡಿತ್ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ ಶುಕ್ರವಾರ ಮುಹೂರ್ತ ಕಾರ್ಯಕ್ರಮ ಮುಗಿಸಿದೆ. ಆದರೆ ನಾಯಕಿ ರಾಧಿಕಾ ಪಂಡಿತ್ ಮುಹೂರ್ತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ.
ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ನಾಯಕ ನಿರೂಪ್ ಭಂಡಾರಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ತಾರಾಗಣವೇ ನೆರೆದಿತ್ತು. ಆದರೆ ರಾಧಿಕಾ ಮಾತ್ರ ಬಂದಿರಲಿಲ್ಲ. ಇದಕ್ಕೆ ರಾಧಿಕಾ ಸ್ವತಃ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ.
ಚಿತ್ರೀಕರಣ ಡಿಸೆಂಬರ್ 10 ರಿಂದ ಪ್ರಾರಂಭವಾಗಲಿದೆ. ಆದರೆ ನಾನು ಸ್ವಲ್ಪ ಸಮಯದ ನಂತರ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದೇನೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಡಿಸೆಂಬರ್ 7 ರಂದು ರಾಧಿಕಾ ಮತ್ತು ಯಶ್ ಮದುವೆಯ ಮೊದಲ ಆನಿವರ್ಸರಿ. ಹೀಗಾಗಿ ಈ ಸಂಭ್ರಮದಲ್ಲಿ ರಾಧಿಕಾ ಬ್ಯುಸಿ. ಇದಾದ ಬಳಿಕ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ