Select Your Language

Notifications

webdunia
webdunia
webdunia
webdunia

ರಾಧಿಕಾ ಪಂಡಿತ್ ಮಡಿಲಿಗೆ ಬಂತು ಮುದ್ದು ಕಂದಮ್ಮ!

ರಾಧಿಕಾ ಪಂಡಿತ್ ಮಡಿಲಿಗೆ ಬಂತು ಮುದ್ದು ಕಂದಮ್ಮ!
ಬೆಂಗಳೂರು , ಸೋಮವಾರ, 12 ಫೆಬ್ರವರಿ 2018 (10:27 IST)
ಬೆಂಗಳೂರು: ಪತಿ ರಾಕಿಂಗ್ ಸ್ಟಾರ್ ಯಶ್ ರನ್ನು ಬಿಟ್ಟು ಅಮೆರಿಕಾ ವಿಮಾನವೇರಿ ಅಣ್ಣನ ಮನೆಗೆ ತೆರಳಿರುವ ರಾಧಿಕಾ ಪಂಡಿತ್ ಮಡಿಲೊಳಗೆ ಇದೀಗ ಪುಟ್ಟ ಕಂದಮ್ಮ ನಗುತ್ತಿದೆ!
 

ಆದರೆ ಈ ಮಗು ಯಾರದ್ದು ಎಂಬ ಕುತೂಹಲವೇ? ರಾಧಿಕಾ ಪಂಡಿತ್ ಸಹೋದರನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅದನ್ನು ಕೈಯಲ್ಲಿ ಹಿಡಿದು ರಾಧಿಕಾ ಭಾವುಕರಾಗಿದ್ದಾರೆ.

ನಾನೀಗ ಅತ್ತೆಯಾದೆ ಎಂದು ರಾಧಿಕಾ ಖುಷಿಯಿಂದಲೇ ಹಂಚಿಕೊಂಡಿದ್ದಾರೆ. ನಾನು ತುಂಬಾ ಭಾವುಕಳಾದ ಕ್ಷಣವಿದು. ಈ ಮಗುವಿನಿಂದ ನನ್ನ ದೃಷ್ಟಿ ತೆಗೆಯಲಾಗುತ್ತಿಲ್ಲ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ರಾಧಿಕಾ ಮಗುವಿನ ಬಗ್ಗೆ ಇಷ್ಟೆಲ್ಲಾ ಹೇಳಿಕೊಂಡಿರುವುದನ್ನು ನೋಡಿ ಅಭಿಮಾನಿಗಳು ಆದಷ್ಟು ಬೇಗ ಜ್ಯೂನಿಯರ್ ಯಶ್-ರಾಧಿಕಾ ಬರಲಿ ಎಂದು ಹಾರೈಸಿದ್ದಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಆನಿವರ್ಸರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಗೆ ಭರ್ಜರಿ ಗಿಫ್ಟ್ ಕೊಟ್ಟವರಾರು ಗೊತ್ತಾ?!