Webdunia - Bharat's app for daily news and videos

Install App

ಬರ್ತ್ ಡೇ ದಿನ ಸಿಗಲ್ಲ, ಆದ್ರೆ ಭಾನುವಾರ ಮಿಸ್ ಮಾಡಲ್ಲ: ಫ್ಯಾನ್ಸ್ ಗೆ ರಚಿತಾ ರಾಮ್ ಪ್ರಾಮಿಸ್

Krishnaveni K
ಮಂಗಳವಾರ, 1 ಅಕ್ಟೋಬರ್ 2024 (15:00 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಸ್ಟಾರ್ ಹೀರೋಗೂ ಕಮ್ಮಿಯಿಲ್ಲದಂತೆ ತಮ್ಮದೇ ಆದ ಅಭಿಮಾನಿ ಬಳಗದವರನ್ನು ಹೊಂದಿದ್ದಾರೆ. ಅವರೀಗ ತಮ್ಮ ಹುಟ್ಟುಹಬ್ಬ ಆಚರಣೆ ಬಗ್ಗೆ ಅಭಿಮಾನಿಗಳೊಂದಿಗೆ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.

ಅಕ್ಟೋಬರ್ 3 ರಂದು ರಚಿತಾ ರಾಮ್ ಹುಟ್ಟುಹಬ್ಬವಿದೆ.  ಆದರೆ ತಮ್ಮ ಗಾಡ್ ಫಾದರ್ ದರ್ಶನ್ ಹತ್ಯೆ ಕೇಸ್ ನಲ್ಲಿ ಅರೆಸ್ಟ್ ಆಗಿರುವ ಬೇಸರದಲ್ಲಿರುವ ನಟಿ ರಚಿತಾ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೇನೋ ಎಂಬ ಅನುಮಾನ ಅಭಿಮಾನಿಗಳಿಗಿತ್ತು.

ಆದರೆ ರಚಿತಾ ಹುಟ್ಟುಹಬ್ಬ ನಿಮಿತ್ತ ಅಭಿಮಾನಿಗಳಿಗೆ ಸಿಗಲಿದ್ದಾರೆ. ಆದರೆ ಹುಟ್ಟುಹಬ್ಬದ ದಿನವಲ್ಲ, ಪ್ರತೀ ಭಾನುವಾರದಂತೆ ಈ ಭಾನುವಾರ ಸಿಗ್ತೀನಿ ಎಂದು ಪ್ರಾಮಿಸ್ ಮಾಡಿದ್ದಾರೆ. ಹುಟ್ಟುಹಬ್ಬದ ದಿನ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳದೇ ಇರಲು ಕಾರಣವನ್ನೂ ತಿಳಿಸಿದ್ದಾರೆ.

ಶೂಟಿಂಗ್ ನಿಮಿತ್ತ ನಾನು ಅಕ್ಟೋಬರ್ 3 ರಂದು ನನ್ನ ಹುಟ್ಟುಹಬ್ಬದ ದಿನ ಮನೆಯಲ್ಲಿರಲ್ಲ. ಹೀಗಾಗಿ ನಿಮ್ಮೊಂದಿಗೆ ಅಂದು ಬರ್ತ್ ಡೇ ಆಚರಿಸಿಕೊಳ್ಳಲು ಆಗುತ್ತಿಲ್ಲ. ಎಲ್ಲರಿಗೂ ಕ್ಷಮೆ ಯಾಚಿಸುತ್ತಾ ಪ್ರತೀ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ ಎಂದು ರಚಿತಾ ಪ್ರಾಮಿಸ್ ಮಾಡಿದ್ದಾರೆ.

ರಚಿತಾ ಮನೆಯಲ್ಲಿದ್ದರೆ ಅನೇಕ ಅಭಿಮಾನಿಗಳು ಅವರನ್ನು ನೋಡಲು ಮನೆಯ ಹತ್ತಿರ ಬರುತ್ತಾರೆ. ಅವರಿಗೆಂದೇ ಭಾನುವಾರ ಮೀಸಲಿಡುವುದಾಗಿ ರಚಿತಾ ಪ್ರಾಮಿಸ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತನ್ನ ಸಿನಿಮಾ ಕೋಟಿ ಕೋಟಿ ಬಾಚಿಕೊಂಡರು ಸರಳತೆಯಲ್ಲಿ ಒಂಚೂರು ಬದಲಾಗದ ರಾಜ್‌ ಬಿ ಶೆಟ್ಟಿ, ಈ ಫೋಟೇನೇ ಸಾಕ್ಷಿ

ಚಿನ್ನ ಸಾಗಿಸಿ ವಿಮಾನದಲ್ಲಿ ಸಿಕ್ಕಿಬಿದ್ದ ರನ್ಯಾ ರಾವ್‌ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ

ವಿಜಯ್ ದೇವರಕೊಂಡ ಬೆನ್ನಲ್ಲೇ ಇಡಿ ಮುಂದೇ ಹಾಜರಾದ ರಾಣಾ ದಗ್ಗುಬಾಟಿ

ವಿಷ್ಣು ಸಮಾಧಿ ನೆಲಸಮ ಬಗ್ಗೆ ಕೊನೆಗೂ ಮಹತ್ವದ ತೀರ್ಮಾನ ಕೈಗೊಂಡ ಕುಟುಂಬ: ಅನಿರುದ್ಧ್ ಹೇಳಿದ್ದೇನು

ಕಾಟೇರ ದಾಖಲೆಯನ್ನೂ ಮುರಿಯಲಿದೆ ಸು ಫ್ರಮ್ ಸೋ

ಮುಂದಿನ ಸುದ್ದಿ
Show comments