Select Your Language

Notifications

webdunia
webdunia
webdunia
webdunia

ಜೇಮ್ಸ್ ಹಾಡಿನಲ್ಲಿ ರಚಿತಾ, ಆಶಿಕಾ, ಚಂದನ್ ಶೆಟ್ಟಿ ಸರ್ಪೈಸ್ ಎಂಟ್ರಿ

ಜೇಮ್ಸ್ ಹಾಡಿನಲ್ಲಿ ರಚಿತಾ, ಆಶಿಕಾ, ಚಂದನ್ ಶೆಟ್ಟಿ ಸರ್ಪೈಸ್ ಎಂಟ್ರಿ
ಬೆಂಗಳೂರು , ಮಂಗಳವಾರ, 1 ಮಾರ್ಚ್ 2022 (18:17 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಟ್ರೇಡ್ ಮಾರ್ಕ್ ಹಾಡು ಇಂದು ಲಾಂಚ್ ಆಗಿದ್ದು, ಹಾಡು ನೋಡಿದ ಫ್ಯಾನ್ಸ್ ಗೆ ನಿಜಕ್ಕೂ ಸರ್ಪೈಸ್ ಕಾದಿತ್ತು.

ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಂ, ಆಶಿಕಾ ರಂಗನಾಥ್, ಶ್ರೀಲೀಲಾ ಮತ್ತು ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಹೀರೋ ಇಂಟ್ರಡಕ್ಷನ್ ಸಾಂಗ್ ಇದಾಗಿದ್ದು, ಈ ಸ್ಟಾರ್ ಕಲಾವಿದರನ್ನು ನೋಡಿ ಪ್ರೇಕ್ಷಕರಿಗೆ ನಿಜಕ್ಕೂ ಅಚ್ಚರಿಯಾಗಿದೆ.

ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಭರ್ಜರಿ ಸ್ಟೆಪ್ಸ್ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಚರಣ್ ರಾಜ್ ಸಂಗೀತ ನಿರ್ದೇಶನದ ಹಾಡು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಳಿ ಮಕ್ಕಳಿಗೆ ಜನ್ಮವಿತ್ತ ನಟಿ ಅಮೂಲ್ಯ