Webdunia - Bharat's app for daily news and videos

Install App

ಆನ್ ಲೈನ್ ಲೀಕ್ ಭಯಕ್ಕೆ ಪುಷ್ಪ 2 ಚಿತ್ರತಂಡ ಮಾಡಿರುವ ಉಪಾಯಗಳಿವು

Krishnaveni K
ಬುಧವಾರ, 29 ಮೇ 2024 (08:44 IST)
ಹೈದರಾಬಾದ್: ಇತ್ತೀಚೆಗೆ ಹೆಚ್ಚಿನ ಸಿನಿಮಾ ತಂಡಗಳೂ ತಮ್ಮ ಸಿನಿಮಾ ಬಿಡುಗಡೆಗೂ ಮುನ್ನ ಸೋರಿಕೆಯಾಗದಂತೆ ಅನೇಕ ಕ್ರಮ ಕೈಗೊಳ್ಳುತ್ತಿವೆ. ಇದೀಗ ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ತಂಡವೂ ಅಂತಹದ್ದೇ ಕ್ರಮ ಕೈಗೊಂಡಿದೆ.

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ಪುಷ್ಪ 2 ಸಿನಿಮಾ ಇದೇ ವರ್ಷ ತೆರೆ ಕಾಣುತ್ತಿದೆ. ಆದರೆ ಇದಕ್ಕೆ ಮೊದಲು ಚಿತ್ರತಂಡ ಶೂಟಿಂಗ್ ಸಂದರ್ಭದಲ್ಲಿ ಫೋಟೋಗಳು, ವಿಡಿಯೋಗಳು ಲೀಕ್ ಆಗದಂತೆ ಕಟ್ಟುನಿಟ್ಟು ಮಾಡಿದೆ.

ಹಲವು ಬಾರಿ ಸಿನಿಮಾ ಬಿಡುಗಡೆಗೆ ಮುನ್ನ ಕತೆ ಬಹಿರಂಗವಾಗಿದ್ದು ಇದೆ. ಅದರಲ್ಲೂ ಪುಷ್ಪ 2 ಕತೆ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. ಹಿಂದೊಮ್ಮೆ ಎರಡನೇ ಭಾಗದಲ್ಲಿ ಹಾಗಂತೆ, ಹೀಗಂತೆ ಎಂಬ ಗಾಳಿ ಸುದ್ದಿ ಹರಡಿತ್ತು.

ಇದೀಗ ಚಿತ್ರೀಕರಣದ ವೇಳೆ ಯಾವುದೇ ದೃಶ್ಯಗಳು ಹೊರಹೋಗದಂತೆ ನಿರ್ದೇಶಕ ಸುಕುಮಾರ್ ಸ್ಟ್ರಿಕ್ಟ್ ಆಗಿ ಮೊಬೈಲ್, ಕ್ಯಾಮರಾ ಬಳಕೆ ನಿಷೇಧಿಸಿದ್ದಾರಂತೆ. ಯಾರೂ ಚಿತ್ರೀಕರಣದ ಫೋಟೋ,ವಿಡಿಯೋ ತೆಗೆಯದಂತೆ ನಿರ್ಬಂಧ ವಿಧಿಸಿದ್ದಾರೆ.

ಒಂದು ವೇಳೆ ಬಿಡುಗಡೆಗೂ ಮುನ್ನವೇ ಕ್ಲೈಮ್ಯಾಕ್ಸ್ ಬಹಿರಂಗವಾದರೆ ಎಂದು ಎರಡೆರಡು ಕ್ಲೈಮ್ಯಾಕ್ಸ್ ಚಿತ್ರೀಕರಿಸುತ್ತಿದ್ದಾರೆ. ಕೊನೆಗೆ ಯಾವ ಕ್ಲೈಮ್ಯಾಕ್ಸ್ ಹೊರಬಿಡಬೇಕೆಂದು ಸುಕುಮಾರ್ ಅವರೇ ನಿರ್ಧರಿಸಲಿದ್ದಾರೆ. ಅಲ್ಲದೆ ಆಯಾ ಕಲಾವಿದರೆ ಆತ/ಆಕೆಯ ಪಾತ್ರದ ಸ್ಕ್ರಿಪ್ಟ್ ಮಾತ್ರ ನೀಡುತ್ತಿದ್ದಾರೆ. ಬೇರೆಯವರ ಸ್ಕ್ರಿಪ್ಟ್ ಸಿಗದಂತೆ ನೋಡಿಕೊಂಡಿದ್ದಾರಂತೆ. ಆ ಮೂಲಕ ಆನ್ ಲೈನ್ ನಲ್ಲಿ ತಮ್ಮ ಚಿತ್ರ ಕತೆ ಸೋರಿಕೆಯಾಗದಂತೆ ಸುಕುಮಾರ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ರಾಜಕೀಯ ಭವಿಷ್ಯದಲ್ಲಿ ಹೊಸ ಮೈಲಿಗಲ್ಲಿನ ಹೆಜ್ಜೆಯಿಟ್ಟ ನಟ ಕಮಲ್ ಹಾಸನ್‌‌‌

ಪಾದ ಪೂಜೆ ನೆರವೇರಿಸಿ, ನನ್ನ ಗಂಡ ಮಿಲಿಯನ್‌ಗೊಬ್ಬ ಎಂದ ಸೋನಲ್, ನಟಿಗೆ ಸಂಪ್ರದಾಯದ ಮೇಲಿನ ಗೌರವಕ್ಕೆ ಫ್ಯಾನ್ಸ್‌ ಫಿದಾ

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ಮುಂದಿನ ಸುದ್ದಿ
Show comments