Webdunia - Bharat's app for daily news and videos

Install App

ಎರಡು ವಾರಗಳಲ್ಲಿ ₹1,508 ಕೋಟಿ ಬಾಚಿಕೊಂಡ ಪುಷ್ಪ 2: ಹೊಸ ದಾಖಲೆ ಬರೆದ ಅಲ್ಲು ಸಿನಿಮಾ

Sampriya
ಶನಿವಾರ, 21 ಡಿಸೆಂಬರ್ 2024 (17:27 IST)
Photo Courtesy X
ಹೈದರಾಬಾದ್‌: ಟಾಲಿವುಡ್‌ ಸ್ಟಾರ್‌ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2 ಚಿತ್ರ ಬಿಡುಗಡೆಗೊಂಡ 15 ದಿನಗಳಲ್ಲಿ ₹1,508 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಅಲ್ಲು ಅರ್ಜುನ್‌ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. ಪುಷ್ಪ 2 ಚಿತ್ರದ ಮೇಲೆ ನೀವು (ಅಭಿಮಾನಿಗಳು) ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದಗಳು ಎಂದು ಅಲ್ಲು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ

ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಸುಕುಮಾರ್ ನಿರ್ದೇಶನದ ತೆಲುಗು ಸಿನಿಮಾ ಪುಷ್ಪ 2 ದಿ ರೂಲ್‌ ಚಿತ್ರ ಬಿಡುಗಡೆಯಾಗಿ ₹1,508 ಕೋಟಿ ಗಳಿಸಿದೆ. ಪುಷ್ಪ 2 ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ಬುಕ್‌ಮೈಶೋನಲ್ಲಿಯೂ ಅತ್ಯಧಿಕ ಟಿಕೆಟ್‌ ಬುಕಿಂಗ್ ಆಗಿದೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು  ಎಂದು ಚಿತ್ರತಂಡ ತಿಳಿಸಿದೆ.

ಈ ಮೂಲಕ ಭಾರತದಲ್ಲಿ 2024ರಲ್ಲಿ ತೆರೆಗೆ ಬಂದ ಚಿತ್ರಗಳಲ್ಲಿ ಗರಿಷ್ಠ ಗಳಿಕೆಯ ದಾಖಲೆ ಬರೆದಿದೆ. ಮಾತ್ರವಲ್ಲ, ಟಾಲಿವುಡ್‌ನಲ್ಲಿ ಬಾಹುಬಲಿ ಬಳಿಕ ಗರಿಷ್ಠ ಹಣ ಮಾಡಿದ ಚಿತ್ರವೂ ಇದಾಗಿದೆ.

ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್‌ ಜೊತೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು ಸೇರಿದಂತೆ ಅನೇಕ ಖ್ಯಾತನಾಮರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಡಿ.4ರಂದು ವಿಶ್ವದಾದ್ಯಂತ ಸಿನಿಮಾ ತೆರೆಕಂಡು ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ, ಬೆಂಗಾಳಿ, ಮಲಯಾಳ ಭಾಷೆಗಳಲ್ಲಿ ಚಿತ್ರವು ತೆರೆಗೆ ಬಂದಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಧನುಷ್ ಜತೆ ಡೇಟಿಂಗ್ ವದಂತಿ, ಕೊನೆಗೂ ಮೌನ ಮುರಿದ ಮೃಣಾಲ್ ಠಾಕೂರ್‌

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಹಿರಿಯ ನಟಿ ಜಯಾ ಬಚ್ಚನ್ ಹೀಗೇ ನಡೆಸಿಕೊಳ್ಳುವುದಾ, ವಿಡಿಯೋ ವೈರಲ್

ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆ ಬೆನ್ನಲ್ಲೇ ಸೆಷನ್ಸ್‌ ಕೋರ್ಟ್‌ ವಿಚಾರಣೆಗೆ ಹಾಜರಾದ ದರ್ಶನ್‌, ಪವಿತ್ರಾ

ತನ್ನ ಸಿನಿಮಾ ಕೋಟಿ ಕೋಟಿ ಬಾಚಿಕೊಂಡರು ಸರಳತೆಯಲ್ಲಿ ಒಂಚೂರು ಬದಲಾಗದ ರಾಜ್‌ ಬಿ ಶೆಟ್ಟಿ, ಈ ಫೋಟೇನೇ ಸಾಕ್ಷಿ

ಮುಂದಿನ ಸುದ್ದಿ
Show comments