Publish Date: Fri, 02 Aug 2019 (09:48 IST)
Updated Date: Fri, 02 Aug 2019 (09:51 IST)
ಬೆಂಗಳೂರು: ಇತ್ತೀಚೆಗೆ ಕಿರುತೆರೆಯ ಧಾರವಾಹಿಗಳಿಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಪ್ರಚಾರ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.
ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಆರಂಭವಾಗಲಿರುವ ಧಾರವಾಹಿಗೆ ಪ್ರಚಾರ ಕೊಟ್ಟಿದ್ದಾರೆ.
ಆಗಸ್ಟ್ 12 ರಿಂದ ಮಧ್ಯಾಹ್ನ 1.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಯಜಮಾನಿ ಎಂಬ ಧಾರವಾಹಿ ಪ್ರಸಾರವಾಗಲಿದೆ. ಅಮೃತವರ್ಷಿಣಿ ಧಾರವಾಹಿ ಖ್ಯಾತಿಯ ರಕ್ಷಿತ್ ಗೌಡ ಈ ಧಾರವಾಹಿಯಲ್ಲಿ ನಾಯಕರಾಗುತ್ತಿದ್ದಾರೆ. ಈ ಧಾರವಾಹಿಗೆ ಪುನೀತ್ ವಿಡಿಯೋ ಸಂದೇಶ ಮೂಲಕ ಆಲ್ ದಿ ಬೆಸ್ಟ್ ಹೇಳಿದ್ದು, ಎಲ್ಲರೂ ನೋಡಿ ಹರಸುವಂತೆ ಕೇಳಿಕೊಂಡಿದ್ದಾರೆ.