ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಕನಸು ಗಂಧದ ಗುಡಿ ಸಾಕ್ಷ್ಯಚಿತ್ರದ ಪ್ರೀಮಿಯರ್ ಶೋ ಇಂದು ನಡೆಯಲಿದೆ.
ನಾಳೆಯಿಂದ ಥಿಯೇಟರ್ ನಲ್ಲಿ ಗಂಧದ ಗುಡಿ ರಿಲೀಸ್ ಆಗುತ್ತಿದೆ. ಇಂದು ಪೂರ್ವಭಾವಿಯಾಗಿ ಕೆಲವು ಕಡೆ ಪ್ರೀಮಿಯರ್ ಶೋ ಆಯೋಜಿಸಲಾಗಿದೆ.
ಇದರ ಟಿಕೆಟ್ ಗಳು ಈಗಾಗಲೇ ಬುಕಿಂಗ್ ಆಗಿದ್ದು, ಪ್ರೀಮಿಯರ್ ಶೋಗೆ ಭರ್ಜರಿ ಬೇಡಿಕೆ ಬಂದಿದೆ. ಇಂದು ಡಾ. ರಾಜ್ ಕುಟುಂಬ ಜೊತೆಗೆ ಸೆಲೆಬ್ರಿಟಿಗಳು ಪ್ರೀಮಿಯರ್ ಶೋ ವೀಕ್ಷಿಸುವ ಸಾಧ‍್ಯತೆಯಿದೆ.
-Edited by Rajesh Patil