Webdunia - Bharat's app for daily news and videos

Install App

ಕೊರೋನಾ ಬಗ್ಗೆ ಭಯ ಬಿಡಿ: ಪುನೀತ್ ರಾಜಕುಮಾರ್ ಕಿವಿಮಾತು

Webdunia
ಶನಿವಾರ, 24 ಏಪ್ರಿಲ್ 2021 (09:51 IST)
ಬೆಂಗಳೂರು: ಎಲ್ಲೆಡೆ ಕೊರೋನಾ ಹಬ್ಬುತ್ತಿರುವುದರಿಂದ ಜನರಲ್ಲಿ ಒಂದು ರೀತಿಯ ಭಯ ಮನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.


ಬೆಂಗಳೂರು ಪೊಲೀಸರೊಂದಿಗೆ ಕೈ ಜೋಡಿಸಿರುವ ಪುನೀತ್ ರಾಜಕುಮಾರ್ ವಿಡಿಯೋ ಸಂದೇಶದ ಮೂಲಕ ಕೊರೋನಾ ಬಗ್ಗೆ ಅನಗತ್ಯ ಭಯ ಬಿಟ್ಟು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. 

ಅರೆಸ್ಟ್ ಕೊರೋನಾ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಪುನೀತ್ ಜನರಿಗೆ ಧೈರ್ಯ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಪುನೀತ್ ‘ಕೊರೋನಾ ವ್ಯಾಕ್ಸಿನ್ ಪಡೆದುಕೊಳ್ಳಿ, ಮಾಸ್ಕ್ ಧರಿಸಿ. ಅಕಸ್ಮಾತ್ ಕೊರೋನಾ ಬಂದರೂ ಭಯಪಡಬೇಡಿ. ವೈದ್ಯರ ಸಲಹೆ ಪಡೆದುಕೊಂಡು ಹೋಂ ಕ್ವಾರಂಟೈನ್ ಗೊಳಗಾಗಿ. ನಾಚಿಕೆ, ಭಯ ಬಿಟ್ಟು ಚಿಕಿತ್ಸೆ ಪಡೆದುಕೊಳ್ಳಿ. ಸೋಂಕಿತರಾಗಿದ್ದರೆ ನೆಗೆಟಿವ್ ವರದಿ ಬರುವವರೆಗೆ ಕೆಲಸಕ್ಕೆ ಹೋಗಬೇಡಿ. ನಿಯಮಗಳನ್ನು ಪಾಲಿಸೋಣ. ಕೊರೋನಾ ವಾರಿಯರ್ಸ್ ನ್ನು ಗೌರವಿಸೋಣ. ಯಾರೂ ತಲೆಕೆಡಿಸಿಕೊಳ್ಳಬೇಡಿ, ಭಯಪಡಬೇಡಿ, ಧೈರ್ಯವಾಗಿರಿ’ ಎಂದು ಪುನೀತ್ ಸಂದೇಶ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ನಾಲಾಯಕ್ ನನ್ ಮಕ್ಳು, ಬಳೆ ತೊಟ್ಕೊಂಡು ಕೂರಿ ಎಂದ ಕಿರಣ್ ಶಾಸ್ತ್ರಿ: ಎಲ್ಲೆ ಮೀರುತ್ತಿದ್ದಾರಾ ಕಾಮನ್ ಸ್ಪರ್ಧಿಗಳು video

BBK13: ದೊಡ್ಮನೆಗೆ ಫ್ಲೈಟ್ ತಂಡ ಬಂದ ಮೇಲೆ ಸೈಲೆಂಟ್ ಆದರಾ ಗಗನ್, ತಾಂಡವ್

ಮನೆಗೆ ಬಂದ ಜಗ್ಗೇಶ್‌ಗೆ ದುಬಾರಿ ವಾಚ್ ಗಿಫ್ಟ್ ಕೊಟ್ಟ ಶಿವರಾಜ್‌ಕುಮಾರ್ ದಂಪತಿ

ಗಣೇಶ ಹಬ್ಬದಂದೇ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಮೊದಲ ಸಿನಿಮಾ ಔಟ್‌: ಜೈ ಜೈ ರಾಮ್ ಹಾಡಿಗೆ ಅಭಿಮಾನಿಗಳು ಫಿದಾ

Video: ವಿಜಯ್‌-ರಶ್ಮಿಕಾ ಅಭಿನಯದ ರಣಬಾಲಿ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್: ಖಡಕ್‌ ಲುಕ್‌ ಅಬ್ಬರಿಸಲಿರುವ ದೇವರಕೊಂಡ

ಮುಂದಿನ ಸುದ್ದಿ
Show comments