Select Your Language

Notifications

webdunia
webdunia
webdunia
webdunia

ಪುನೀತ್ ರಾಜಕುಮಾರ್ ಗೆ ಅವಮಾನ ಮಾಡಿತಾ ಖಾಸಗಿ ವಾಹಿನಿ? ಅಭಿಮಾನಿಗಳ ಆಕ್ರೋಶ

ಪುನೀತ್ ರಾಜಕುಮಾರ್ ಗೆ ಅವಮಾನ ಮಾಡಿತಾ ಖಾಸಗಿ ವಾಹಿನಿ? ಅಭಿಮಾನಿಗಳ ಆಕ್ರೋಶ
ಬೆಂಗಳೂರು , ಬುಧವಾರ, 26 ಆಗಸ್ಟ್ 2020 (12:18 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಉದಯ ಮ್ಯೂಸಿಕ್ ವಾಹಿನಿ ಅವಮಾನ ಮಾಡಿದೆ ಎಂದು ಆರೋಪಿಸಿ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಬಳಿಕ ವಾಹಿನಿ ಕ್ಷಮೆ ಕೇಳಿದ ಘಟನೆ ನಡೆದಿದೆ.


ಕಾರ್ಯಕ್ರಮವೊಂದರಲ್ಲಿ ಪುನೀತ್ ಫೋಟೋವನ್ನು ತಿರುಚಿ ಈ ನಟ ಯಾರೆಂದು ಗುರುತಿಸಿ ಎಂದು ವೀಕ್ಷಕರೊಬ್ಬರಿಗೆ ಪ್ರಶ್ನೆ ಕೇಳಲಾಯಿತು. ಆದರೆ ಈ ರೀತಿ ನಟನ ಫೋಟೋವನ್ನು ತಿರುಚಿರುವುದು ಅವರಿಗೆ ಮಾಡಿದ ಅವಮಾನ ಎಂದು ಅಪ್ಪು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತುಕೊಂಡ ವಾಹಿನಿ ತಕ್ಷಣವೇ ಹೇಳಿಕೆ ಬಿಡುಗಡೆ ಮಾಡಿ ನಮಗೆ ಪುನೀತ್ ಮೇಲೆ ಅಪಾರ ಗೌರವವಿದೆ. ಈ ಫೋಟೋದಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಕೇಳಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ತಂಡ ಸೇರಿಕೊಂಡ ಖ್ಯಾತ ನಟ ಯಾರು ಗೊತ್ತೇ?