ಅಪ್ಪನ ಮರ್ಯಾದೆ ಕಳೀಬೇಡಮ್ಮಾ: ಪುನೀತ್ ರಾಜ್ ಕುಮಾರ್ ಪುತ್ರಿ ಧೃತಿಗೆ ನೆಟ್ಟಿಗರ ಕ್ಲಾಸ್

Sampriya
ಮಂಗಳವಾರ, 24 ಸೆಪ್ಟಂಬರ್ 2024 (17:12 IST)
photo Courtesy Instagram
ಬೆಂಗಳೂರು:  ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪುತ್ರಿ ಧೃತಿ ಅವರು ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಧೃತಿ ಅವರು ಈಚೆಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗೆ ಅಪ್ಪು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.

ಅಕ್ಟೋಬರ್ 29ಕ್ಕೆ ಪುನೀತ್ ರಾಜ್‌ಕುಮಾರ್ ಅವರು ನಿಧನರಾಗಿ ಮೂರು ವರ್ಷ ತುಂಬುತ್ತೆ. ಆದರೆ ಅವರ ಅಭಿಮಾನಿಗಳು ಪ್ರತಿದಿನವೂ ಅವರನ್ನು ನೆನಪಿನಲ್ಲಿ ಒಂದಲ್ಲ ಒಂದು ಕಾರ್ಯ ಮಾಡುತ್ತಾ ಸ್ಮರಿಸುತ್ತಿರುತ್ತಾರೆ. ಜೀವಂತವಾಗಿ ಇಲ್ಲದಿದ್ದರೂ, ಅವರ ನೆನಪುಗಳು ಮಾತ್ರ ಜೀವಂತವಾಗಿದೆ.

ಸರಳತೆ, ವಿನಯತೆಗೆ ಪ್ರತೀಕವಾಗಿದ್ದ ಪುನೀತ್ ಅವರು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅಚ್ಚುಮೆಚ್ಚು. ಇನ್ನೂ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡಾ ತುಂಬಾನೇ ಸರಳ ವ್ಯಕ್ತಿತ್ವದವರು. ಇದೀಗ ಇವರ ಮಗಳು ಧೃತಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ನೋಡಿ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಧೃತಿ ಹಂಚಿಕೊಂಡ ಫೋಟೋದಲ್ಲಿ ಹಾಟ್ ಉಡುಗೆಯಲ್ಲಿ ಕಾಣಿಸಿಕೊಂಡರು.

ಅಪ್ಪು, ಸರ್ ಮರ್ಯಾದೆ ತೆಗೆಬೇಡಿ ಮೇಡಂ ಎಂದು ಒಬ್ಬರು ಬರೆದುಕೊಂಡರೆ, ಮತ್ತೊಬ್ಬರು ಮೇಡಂ ಫೋಟೋ ಆತರ ಹಾಕ್ಬೇಡಿ ಮೇಡಂ ನೀವು ನಮ್ ಬಾಸ್ ಮಗ್ಳು ಮೇಡಮ್ ನೀವು ಅವರ್ಗೆ ಅಂತ ಇಡೀ ಸ್ಟೇಟ್ ಅಲ್ಲಿ ಒಂದು ಬೆಲೆ ಇದೆ ಮೇಡಂ ಪ್ಲೀಸ್ ಮೇಡಂ ಪ್ಲೀಸ್ ಫೋಟೋನ ಡಿಲೀಟ್ ಮಾಡಿ ಮೇಡಂ ನಮ್ ಬಾಸ್ ಗೆ ಏಗೆ ಗೌರವ ಕೊಡ್ತೀವಾ ನಾವು ಹಾಗೆ ನಿಮಗೂ ನಿಮಗೂ ಫ್ಯಾಮಿಲಿಗೂ ಅಷ್ಟೇ ಗೌರವ ಇದೆ ಮೇಡಂ ನಮಗೆ ಪ್ಲೀಸ್ ಮೇಡಂ ಫೋಟೋ ಡಿಲೀಟ್ ಮಾಡಿ ಆತರ ಹಾಕ್ಬೇಡಿ ಮೇಡಂ ಇತರ ಹೇಳೋ ಅಧಿಕಾರ ನನಗಿಲ್ಲ ಮೇಡಂ ಆದರೂ ನಮ್ಮ ಭಾಷೆಗೆ ಎಷ್ಟು ಗೌರವ ಕೊಡ್ತೀವೋ ನಿಮಗೂ ಫ್ಯಾಮಿಲಿ ಅಷ್ಟೇ ಗೌರವ ಕೊಡ್ತೀವಿ ಮೇಡಂ ನಾನು ಎಂದು ಬೇಡಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಇಬ್ಬರು ಮಕ್ಕಳಾದ ಧೃತಿ ಹಾಗೂ ವಂದನಾ ಹೆಚ್ಚೇನು ಸಾರ್ವಜನಿಕ ಸಮಾರಂಭದಲ್ಲಿ, ಸಿನಿಮಾ ಇವೆಂಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.  ಈಚೆಗೆ ಧೃತಿ ಬೆಂಗಳೂರಿಗೆ ಬಂದಿದ್ದ ವೇಳೆ ತಾಯಿ ಜತೆ ಒಂದು ಫ್ರೋಗ್ರಾಂಗೆ ಆಗಮಿಸಿದ್ದರು. ಈ ವೇಳೆಯೂ ಪುನೀತ್ ಮಕ್ಕಳ ಡ್ರೆಸ್ ಬಗ್ಗೆ ಅವರ ಅಭಿಮಾನಿಗಳು ಇಂಥ ಉಡುಪು ಧರಿಸಬೇಡಿ ಎಂದು ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಬಿಗ್‌ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿಯೇ ಪ್ರಮುಖ ಟಾರ್ಗೆಟ್‌: ಮತ್ತೊರ್ವ ಮಹಿಳಾ ಸ್ಪರ್ಧಿ ಕಿರಿಕ್‌

ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ

ಬೆಳಕಿಲ್ಲದ ದೀಪಾವಳಿಯೊಂದಿಗೆ ನಟ ದರ್ಶನ್‌ಗೆ ಬೆನ್ನು ನೋವಿನ ಸಂಕಟ

ಮುಂದಿನ ಸುದ್ದಿ
Show comments